Dailyhunt
ಇರಾನ್‌ನಿಂದ ಡ್ರೋನ್ ದಾಳಿ| ಪರ್ಷಿಯನ್ ಕೊಲ್ಲಿಯಲ್ಲಿ ಸೌದಿ ಆರೇಬಿಯದ ಪೈಪ್‌ಲೈನ್‌ಗೆ ಹಾನಿ

ಇರಾನ್‌ನಿಂದ ಡ್ರೋನ್ ದಾಳಿ| ಪರ್ಷಿಯನ್ ಕೊಲ್ಲಿಯಲ್ಲಿ ಸೌದಿ ಆರೇಬಿಯದ ಪೈಪ್‌ಲೈನ್‌ಗೆ ಹಾನಿ

ರಿಯಾದ್‌: ಸೌದಿ ಆರೇಬಿಯದ ಪೂರ್ವ-ಪಶ್ಚಿಮ ತೈಲ ಪೈಪ್‌ಲೈನ್ ಮೇಲೆ ಬುಧವಾರ ಇರಾನ್ ಡ್ರೋನ್ ದಾಳಿ ನಡೆಸಿದೆ. ಇದರಿಂದಾಗಿ ಪರ್ಷಿಯನ್ ಕೊಲ್ಲಿಯಿಂದ ಕೆಂಪು ಸಮುದ್ರಕ್ಕೆ ಕಚ್ಚಾ ತೈಲವನ್ನು ಕೊಂಡೊಯ್ಯುತ್ತಿದ್ದ ಪ್ರಮುಖ ರಫ್ತು ಕೊಳವೆ ಮಾರ್ಗಕ್ಕೆ ಹಾನಿಯಾಗಿದೆ.

ಪಾಕಿಸ್ತಾನದಲ್ಲಿ ಅಮೆರಿಕದ ಜೊತೆ ನಡೆಯಲಿರುವ ಮಾತುಕತೆಯ ಕಾರ್ಯಚೌಕಟ್ಟಿಗೆ ಸಮ್ಮತಿಯೇರ್ಪಟ್ಟಲ್ಲಿ ಗುರುವಾರ ಅಥವಾ ಶುಕ್ರವಾರವೇ ಹಾರ್ಮುಝ್ ಜಲಸಂಧಿಯನ್ನು ತೆರೆಯಲಾಗುವುದೆಂದು ಇರಾನ್ ತಿಳಿಸಿದೆ.

ಮಾತುಕತೆಗೆ ಸಂಬಂಧಿಸಿದ ಇರಾನ್‌ನ ಪ್ರಸ್ತಾವಿತ 10 ಅಂಶಗಳ ಕಾರ್ಯಚೌಕಟ್ಟು, ಕೇವಲ ಪರಮಾಣು ಕಾರ್ಯಕ್ರಮವನ್ನು ಮಾತ್ರವಲ್ಲ ಪ್ರಾದೇಶಿಕ ಭದ್ರತೆಯನ್ನು ಒಳಗೊಂಡಿರುತ್ತದೆ. ಅಲ್ಲದೆ ಸುಮಾರು 45 ವರ್ಷಗಳಂದ ಇರಾನ್ ಮೇಲೆ 45 ವರ್ಷಗಳಂದ ಅಮೆರಿಕ ವಿಧಿಸಿರುವ ನಿರ್ಬಂಧಗಳು ಕೂಡಾ ಮಾತುಕತೆಯಲ್ಲಿ ಚರ್ಚಿಸಲಾಗುವುದು ಎಂದು ವರದಿಯೊಂದು ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi