Dailyhunt
ಜಲ್ಲಿ ಸಾಗಾಟದ ಲಾರಿ ಪಲ್ಟಿ: ಕಾರಿಗೆ ಹಾನಿ

ಜಲ್ಲಿ ಸಾಗಾಟದ ಲಾರಿ ಪಲ್ಟಿ: ಕಾರಿಗೆ ಹಾನಿ

ಮಣಿಪಾಲ, ಎ.23: ಬ್ರೇಕ್ ಜಾಮ್ ಆದ ಪರಿಣಾಮ ಜಲ್ಲಿ ಸಾಗಾಟದ ಲಾರಿಯೊಂದು ರಸ್ತೆ ಮಧ್ಯೆ ಮಗುಚಿ ಬಿದ್ದ ಘಟನೆ ಇಂದು ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಲ್ಲಿ ನಡೆದಿದೆ.

ಬ್ರೇಕ್ ಜಾಮ್ ಆದ ಪರಿಣಾಮ ರಸ್ತೆ ಲಾರಿ ಮಗುಚಿ ಬಿದಿದ್ದು, ಇದರಿಂದ ಎದುರಿನಿಂದ ಬರುತ್ತಿದ್ದ ಕಾರಿಗೆ ಹಾನಿಯಾಗಿದೆ. ಲಾರಿ ಸಂಪೂರ್ಣ ನಜ್ಜು ಗುಜ್ಜು ಆಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಪಘಾತದಿಂದ ರಸ್ತೆಯಲ್ಲಿ ಜಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Varthabharathi