ಬೆಂಗಳೂರು : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ದೇಶದ ಪ್ರತಿಷ್ಟಿತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಫಲಿತಾಂಶ ಪ್ರಕಟಿಸಿದ್ದು, ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ಮಾರತ್ತಹಳ್ಳಿ ಬ್ರಾಂಚ್‍ನಲ್ಲಿ ಕಲಿಯುತ್ತಿರುವ ಆದಿತ್ಯ ಸಿಂಗ್ ಅಖಿಲ ಭಾರತ ಮಟ್ಟದಲ್ಲಿ 87ನೆ ರ್ಯಾಂಕ್(ಶೇ.99-99), ರಾಮ್ ನಿಖಿಲ್-135ನೆ ರ್ಯಾಂಕ್(ಶೇ.99.99), ತನ್ಮಯ ಎಚ್.ಜಿ. -381ನೇ ರ್ಯಾಂಕ್, ಸುಧನವನ್-497ನೆ ರ್ಯಾಂಕ್ ಗಳಿಸಿದ್ದಾರೆ.
ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಸೀಮಾ ಬೊಪಣ್ಣ ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

