Saturday, 01 Aug, 10.10 pm ವಾರ್ತಾಭಾರತಿ

ಕರಾವಳಿ
ಜೆಪ್ಪು ಸಂತ ಆಂತೋನಿ ಆಶ್ರಮ : ಆಡಳಿತಾಧಿಕಾರಿಯಾಗಿ ಫಾ.ಆಲ್ಬನ್ ಅಧಿಕಾರ ಸ್ವೀಕಾರ

ಮಂಗಳೂರು, ಆ.1: ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ ಆಂತೋನಿ ಆಶ್ರಮದ ನೂತನ ಆಡಳಿತಾಧಿಕಾರಿಯಾಗಿ ಫಾ.ಆಲ್ಬನ್ ರಾಡ್ರಿಗಸ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಫಾ.ತ್ರಿಶಾನ್ ಡಿಸೋಜ ಅವರು ಮೊಡಂಕಾಪು ಚರ್ಚಿಗೆ ವರ್ಗಾವಣೆಗೊಂಡ ಬಳಿಕ ಈ ಹುದ್ದೆ ತೆರವಾಗಿತ್ತು. ತಣ್ಣೀರುಬಾವಿ ಚರ್ಚಿನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ಫಾ.ಅಲ್ಬನ್ ರಾಡ್ರಿಗಸ್ ಈಗ ಆಶ್ರಮದ ನೂತನ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಸಂದರ್ಭ ಆಶ್ರಮದ ನಿರ್ದೇಶಕ ಫಾ.ಒನಿಲ್ ಡಿಸೋಜ, ಸಹಾಯಕ ನಿರ್ದೇಶಕ ಫಾ. ರೋಶನ್ ಡಿಸೋಜ ಹಾಗೂ ತಣ್ಣೀರುಬಾವಿ ಚರ್ಚಿನ ನೂತನ ಧರ್ಮಗುರು ಫಾ.ಎಲಿಯಾಸ್ ಡಿಸೋಜ ಉಪಸ್ಥಿತರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top