Dailyhunt Logo
  • Light mode
    Follow system
    Dark mode
    • Play Story
    • App Story
ಜಿ20 ಶೃಂಗಸಭೆಯಲ್ಲಿ ಪುಟಿನ್‍ರನ್ನು ಭೇಟಿಯಾಗಲು ಸಿದ್ಧ: ಝೆಲೆನ್‍ಸ್ಕಿ

ಜಿ20 ಶೃಂಗಸಭೆಯಲ್ಲಿ ಪುಟಿನ್‍ರನ್ನು ಭೇಟಿಯಾಗಲು ಸಿದ್ಧ: ಝೆಲೆನ್‍ಸ್ಕಿ

ಕೀವ್: ಉಕ್ರೇನ್‍ನಲ್ಲಿನ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನಗಳು ತೀವ್ರಗೊಳ್ಳುತ್ತಿರುವಂತೆಯೇ, ಡಿಸೆಂಬರ್‌ನಲ್ಲಿ ಮಿಯಾಮಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ತಾವು ಸಿದ್ಧರಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಶನಿವಾರ ತಿಳಿಸಿದ್ದಾರೆ.

ಅಮೆರಿಕವು 19 ದೇಶಗಳು ಹಾಗೂ ಯುರೋಪಿಯನ್ ಯೂನಿಯನ್ ಮತ್ತು ಆಫ್ರಿಕನ್ ಯೂನಿಯನ್ ಒಳಗೊಂಡಿರುವ ಜಿ20 ಪ್ರಮುಖ ಅರ್ಥವ್ಯವಸ್ಥೆಗಳ ಒಕ್ಕೂಟದ ಈ ವರ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಡಿಸೆಂಬರ್‌ನಲ್ಲಿ ಮಿಯಾಮಿಯಲ್ಲಿ ನಡೆಯುವ ನಾಯಕರ ಶೃಂಗಸಭೆಯೊಂದಿಗೆ ಅಧ್ಯಕ್ಷತೆ ಮುಕ್ತಾಯಗೊಳ್ಳಲಿದೆ.

ಡಿಸೆಂಬರ್‌ನಲ್ಲಿ ನಡೆಯುವ ಶೃಂಗಸಭೆಗೆ ಇಬ್ಬರೂ ನಾಯಕರಿಗೆ ಆಹ್ವಾನ ನೀಡಿದರೆ ಪುಟಿನ್ ಅವರನ್ನು ಭೇಟಿಯಾಗಲು ಸಿದ್ಧರಿರುವುದಾಗಿ ಝೆಲೆನ್‍ಸ್ಕಿ ಹೇಳಿರುವುದಾಗಿ ವರದಿಯಾಗಿದೆ. ಉಕ್ರೇನ್ ಈಗ ಯುದ್ಧಭೂಮಿಯಲ್ಲಿ ಕಳೆದ ವರ್ಷಕ್ಕಿಂತ ಶಕ್ತಿಶಾಲಿಯಾಗಿದೆ. ನಾವು ಈಗ ಮಾತುಕತೆಗೆ ಸೂಕ್ತವಾದ ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಝೆಲೆನ್‍ಸ್ಕಿ ಪ್ರತಿಪಾದಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi