Dailyhunt Logo
  • Light mode
    Follow system
    Dark mode
    • Play Story
    • App Story
ಕಾನತ್ತಡ್ಕ ಮೊಯ್ದಿನ್ ಕುಟ್ಟಿ ಹಾಜಿ

ಕಾನತ್ತಡ್ಕ ಮೊಯ್ದಿನ್ ಕುಟ್ಟಿ ಹಾಜಿ

ವಿಟ್ಲ, ಅ.26: ಇಲ್ಲಿನ ಬಾಕಿಮಾರು ಅರಮನೆ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಎಂ.ಕೆ. ಟಿಂಬರ್ ಏಜೆನ್ಸೀಸ್ ಹೆಸರಿನಲ್ಲಿ ಮರದ ಡಿಪೋವನ್ನು ಹೊಂದಿದ್ದ ಕಾನತ್ತಡ್ಕ ನಿವಾಸಿ ಮೊಯ್ದಿನ್ ಕುಟ್ಟಿ ಹಾಜಿ(78) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ಸುಮಾರು ನಾಲ್ಕು ದಶಕಗಳಿಂದ ವಿಟ್ಲದಲ್ಲಿ ಮರ ಮತ್ತು ಹಂಚು ವ್ಯಾಪಾರದ ಉದ್ದಿಮೆಯನ್ನು ಹೊಂದಿದ್ದ ಅವರು ಸೌಮ್ಯ ಸ್ವಭಾವದ ಪ್ರಾಮಾಣಿಕ ಮತ್ತು ನಿಷ್ಠಾವಂತ ವ್ಯಕ್ತಿತ್ವದವರಾಗಿದ್ದು, ಕೊಡುಗೈ ದಾನಿಯೆನಿಸಿಕೊಂಡಿದ್ದರು.

ಮೃತರು ಪತ್ನಿ ಮತ್ತು ಮೂವರು ಪುತ್ರರು ಇಬ್ಬರು ಪುತ್ರರ ಸಹಿತ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ದಫನ ಕಾರ್ಯವು ಅಳಿಕೆ ಜುಮಾ ಮಸೀದಿ ವಠಾರದಲ್ಲಿ ನೆರವೇರಿತು.

Dailyhunt
Disclaimer: This content has not been generated, created or edited by Dailyhunt. Publisher: Varthabharathi