ಟೆಲ್‌ಅವೀವ್: ಇರಾನ್‌ನೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನವಿರಾಮ ಘೋಷಿಸಿದ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಸ್ವದೇಶದಲ್ಲಿ ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಕದನವಿರಾಮ ಒಪ್ಪಂದವು ಇಸ್ರೇಲ್ ಪಾಲಿಗೆ ಒಂದು ಐತಿಹಾಸಿಕ ವೈಫಲ್ಯವಾಗಿದೆಎಂದು ಪ್ರತಿಪಕ್ಷ ನಾಯಕ ಯಾಯಿರ್ ಲ್ಯಾಪಿಡ್ ಖಂಡಿಸಿದ್ದಾರೆ.
ಭದ್ರತೆಗೆ ಸಂಬಂಧಿಸಿದ ಈ ಮಹತ್ವದ ಮಾತುಕತೆಗಳಿಂದ ಇಸ್ರೇಲನ್ನು ಹೊರಗಿಟ್ಟಿರುವುದಕ್ಕೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
''ನಮ್ಮ ರಾಷ್ಟ್ರೀಯ ಭದ್ರತೆಯ ಜೊತೆ ನಂಟು ಹೊಂದಿರುವ ವಿಶಯಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುವಾಗ ಇಸ್ರೇಲ್ ಮಾತುಕತೆಯ ಮೇಜಿನಲ್ಲಿ ಇರಲೇ ಇಲ್ಲ ಎಂದು ಲ್ಯಾಪಿಡ್ ಹೇಳಿದ್ದಾರೆ. ಇರಾನ್ ಜೊತೆ ಅಮೆರಿಕವು ಏರ್ಪಡಿಸಿಕೊಂಡಿರುವ ಕದನವಿರಾಮವನ್ನು ರೂಪಿಸುವಲ್ಲಿ ಇಸ್ರೇಲ್ ಸರಕಾರ ಪಾತ್ರವೇನೆಂಬುದನ್ನು ಅವರು ಪ್ರಶ್ನಿಸಿದ್ದಾರೆ. ಇರಾನ್ ಜೊತೆಗಿನ ಸಂಘರ್ಷದಲ್ಲಿ ಇಸ್ರೇಲಿ ಸಶಸ್ತ್ರ ಪಡೆಗಳು ತಮಗೆ ವಹಿಸಿದ್ದ ಎಲ್ಲಾ ಕಾರ್ಯಗಳನ್ನು ಸಮರ್ಥವಾಗಿ ಈಡೇರಿಸಿವೆ. ನಾಗರಿಕರು ಕೂಡಾ ಸಹಕಾರವನ್ನು ನೀಡಿದ್ದಾರೆ. ಆದಾಗ್ಯೂ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ರಾಜತಾಂತ್ರಿಕವಾಗಿ ಹಾಗೂ ವ್ಯೆಹಾತ್ಮಕವಾಗಿ ವಿಲರಾಗಿದ್ದಾರೆ. ಪ್ರಧಾನಿಯವರು ಹೇಳಿಕೊಂಡಿದ್ದ ಯಾವುದೇ ಗುರಿಗಳು ಈಡೇರಿಲ್ಲವೆಂದು ಅವರು ಹೇಳಿದ್ದಾರೆ. ಇಸ್ರೇಲ್ ಪ್ರಧಾನಿಯ ' ಉದ್ದಟತನ, ನಿರ್ಲಕ್ಷ್ಯ ಹಾಗೂ ವ್ಯೆಹಾತ್ಮಕ ಯೋಜನೆಯ ಕೊರತೆ'ಯಿಂದಾಗಿ ಇಸ್ರೇಲ್‌ಗೆ ಭಾರೀ ಹಾನಿಯಾಗಿದ್ದು, ಅದನ್ನು ಸರಿಪಡಿಸಲು ವರ್ಷಗಳೇ ಬೇಕಾದೀತು ಎಂದು ಲ್ಯಾಪಿಡ್ ಹೇಳಿದ್ದಾರೆ.

