Sunday, 20 Sep, 9.26 pm ವಾರ್ತಾಭಾರತಿ

ಕರಾವಳಿ
ಕಲ್ಲಡ್ಕ: ಮಸೀದಿ ಆಡಳಿತ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆ

ಬಂಟ್ವಾಳ: ಕಲ್ಲಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಸಮಿತಿ ವತಿಯಿಂದ ಮುನೀರುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಇತ್ತೀಚೆಗೆ ಮದ್ರಸ ಗುರುಗಳ ಶಿಕ್ಷಕರ ದಿನಾಚರಣೆ ನಡೆಯಿತು.

ಕಲ್ಲಡ್ಕ ಖತೀಬ್ ಶೇಖ್ ಮಹಮ್ಮದ್ ಇರ್ಫಾನಿ ಫೈಝಿ ಅಲ್ ಅಝ್ ಹರಿ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ. ಸಿ.ರೋಡ್ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಮಾತನಾಡಿ, 'ಉದ್ಯಮವಾಗಿರಲಿ, ವ್ಯಾಪಾರವೇ ಆಗಿರಲಿ ಅಥವಾ ಬೇರೆ ಯಾವುದೇ ರೀತಿಯ ಉದ್ಯೋಗವಿರಲಿ, ಇವೆಲ್ಲಕ್ಕಿಂತ ಶಿಕ್ಷಕ ವೃತ್ತಿ ಪರಮಶ್ರೇಷ್ಠ' ಎಂದರು.

ಹಾಜಿ ಅಬೂಬಕ್ಕರ್ ‌ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಸಮಿತಿ ಸದಸ್ಯರು, ಮದ್ರಸ ಶಿಕ್ಷಕರು ಉಪಸ್ಥಿತರಿದ್ದರು. ಸದರ್ ಬಿ.ಟಿ.ಇಕ್ಬಾಲ್ ದಾರಿಮಿ ಸ್ವಾಗತಿಸಿದರು. ಅಬ್ದುಲ್ಲಾ ಮುಸ್ಲಿಯಾರ್ ವಂದಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top