Wednesday, 21 Oct, 3.26 pm ವಾರ್ತಾಭಾರತಿ

ಕರಾವಳಿ
ಕರಾಯ: ರಾಜ್ಯ ಪೈಝೀಸ್ ವತಿಯಿಂದ ರಬೀಹ್ ಕ್ಯಾಂಪೈನ್ ಉದ್ಘಾಟನೆ

ಉಪ್ಪಿನಂಗಡಿ: ಪೈಝೀಸ್ ಅಸೋಶಿಯೇಶನ್ ಇದರ ರಾಜ್ಯ ಘಟಕದ ವತಿಯಿಂದ ತಿಂಗಳು ಪೂರ್ತಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಮೀಲಾದ್ ಪ್ರಯುಕ್ತ "ಸಮಕಾಲೀ‌ನ ಸಮಸ್ಯೆಗೆ ಪ್ರವಾದಿ ಚರ್ಯೆಯಲ್ಲಿ ಪರಿಹಾರ" ಎಂಬ ಘೋಷಣೆಯೊಂದಿಗೆ ಹಮ್ಮಿಕೊಳ್ಳಲಾದ ರಬೀಅ ಕ್ಯಾಂಪಯಿನ್ ಇದರ ಉದ್ಘಾಟನಾ ಕಾರ್ಯಕ್ರಮ ಉಪ್ಪಿನಂಗಡಿ ಸಮೀಪದ ಕರಾಯ ಮಸೀದಿ ವಠಾರದಲ್ಲಿ ಜರಗಿತು.

ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜು ಇದರ ಪ್ರಾನ್ಸುಪಾಲ ಶೈಖುನಾ ಉಸ್ಮಾನ್ ಪೈಝಿ ಅವರ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಯ್ಯಿದ್ ಪೂಕೋಯ ತಙಳ್ ಪುತ್ತೂರು ಉದ್ಘಾಟಿಸಿದರು.

ಎಸ್.ಬಿ ದಾರಿಮಿ, ಸ್ಥಳೀಯ ಮುದರ್ರಿಸ್ ಹೈದರ್ ದಾರಿಮಿ, ತಬೀಬ್ ಹಬೀಬುರ್ರಹ್ಮಾನ್ ತಂಙಳ್, ಇಸ್ಮಾಯಿಲ್ ಪೈಝಿ ಸೂರಿಂಜೆ, ಶರೀಪ್ ಪೈಝಿ ಕಡಬ, ಶುಕೂರ್ ದಾರಿಮಿ ಕರಾಯ ಮೊದಲಾದವರು ಮಾತನಾಡಿದರು.

ಸಿದ್ದೀಖ್ ಪೈಝಿ ಕರಾಯ ಸ್ವಾಗತಿಸಿದರು. ಇ.ಕೆ. ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕರಾಯ, ಅಬ್ದುಲ್ ಖಾದರ್ ಹಾಜಿ ರೈಟರ್, ಆದಂ ದಾರಿಮಿ ಅಜ್ಜಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top