Dailyhunt
ಕಟಪಾಡಿ ಲೋಂಬಾರ್ಡ್ ಮಿಷನ್ ಆಸ್ಪತ್ರೆಯ ಆರೋಗ್ಯ ಕೇಂದ್ರ ಉದ್ಘಾಟನೆ

ಕಟಪಾಡಿ ಲೋಂಬಾರ್ಡ್ ಮಿಷನ್ ಆಸ್ಪತ್ರೆಯ ಆರೋಗ್ಯ ಕೇಂದ್ರ ಉದ್ಘಾಟನೆ

ಡುಪಿ, ಎ.4: ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಮೆಮೋ ರಿಯಲ್(ಮಿಷನ್) ಆಸ್ಪತ್ರೆಯ ಪೂರ್ಣ ಪ್ರಮಾಣದ ಮೊದಲ ಆರೋಗ್ಯ ಕೇಂದ್ರ (ಪಾಲಿ ಕ್ಲಿನಿಕ್) ಕಟಪಾಡಿಯ ಬಸ್ ನಿಲ್ದಾಣದ ಬಳಿ ಶನಿವಾರ ಉದ್ಘಾಟನೆಗೊಂಡಿತು.

ಲೋಂಬಾರ್ಡ್ ಮಿಷನ್ ಆಸ್ಪತ್ರೆಯ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ ಸಿ.ಎಸ್.ಐ-ಕರ್ನಾಟಕ ದಕ್ಷಿಣ ಧರ್ಮ ಪ್ರಾಂತದ(ಕೆಎಸ್‌ಡಿ) ಬಿಷಪ್ ರೈಟ್ ರೆ.ಹೇಮಚಂದ್ರ ಕುಮಾರ್ ಮಾತನಾಡಿ, ನಗರಗಳಿಗೆ ಮಾತ್ರ ಸೀಮಿತವಾಗಿ ರದೆ ಗ್ರಾಮೀಣ ಪ್ರದೇಶದ ಅಸಹಾಯಕರು, ಆರ್ಥಿಕವಾಗಿ ಹಿಂದುಳಿದವರಿಗೂ ಕೂಡ ಪರಿಪೂರ್ಣ ವಾದ ಆರೋಗ್ಯ ನೀಡುವ ನಿಟ್ಟಿನಲ್ಲಿ ಕಟಪಾಡಿಯಂತಹ ಗ್ರಾಮೀಮ ಪ್ರದೇಶದಲ್ಲಿ ನಮ್ಮ ಸೇವೆಯನ್ನು ಆರಂಭಿಸಲಾಗಿದೆ.

ಈ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ಮಾತನಾಡಿ, ಕಟಪಾಡಿಯ ಈ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯ ಸೇವೆ, ಎಕ್ಸ್‌ರೇ ಯುನಿಟ್ ಸೇರಿದಂತೆ ಎಲ್ಲಾ ಸೌಲಭ್ಯಗಳು ಲಭ್ಯ ಇರುತ್ತದೆ. ವಾರಕ್ಕೆ ಆರು ದಿನ ಬೆಳಗ್ಗೆ 8ಗಂಟೆಯಿಂದ ಸಂಜೆ 6ಗಂಟೆಯವರೆಗೆ ಈ ಕೇಂದ್ರ ತೆರೆದಿರುತ್ತದೆ. ಇಲ್ಲಿ ಖಾಯಂ ವೈದ್ಯರೊಂದಿಗೆ ಮಿಷನ್ ಆಸ್ಪತ್ರೆಯ ಎಲ್ಲಾ ವಿಭಾಗಗಳ ತಜ್ಞ ವೈದ್ಯರ ಸೇವೆಯೂ ಲಭ್ಯ ಇರುತ್ತದೆ ಎಂದರು.

ಇದು ಕೇವಲ ಕಟ್ಟಡಗಳ ಕೇಂದ್ರ ಅಲ್ಲ. ನಮ್ಮ ದೃಷ್ಠಿಯ ಸಾರ್ಥಕತೆ ಆಗಿದೆ. ನಮ್ಮ ದೃಷ್ಠಿಯು ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿರದೆ ಹಳ್ಳಿಹಳ್ಳಿ ಗಳಿಗೂ ಹೆಜ್ಜೆ ಇಡುವುದಾಗಿದೆ. ನಮ್ಮ ಸೇವೆ ಸಮುದಾಯ, ಸಮಾಜ, ಪರಿಸರಕ್ಕಾಗಿ ನಡೆಸಲಾಗುವುದು. ಈ ಕೇಂದ್ರ ಸ್ಥಾಪಿಸಿರುವುದು ಜನರ ಸೇವೆಗಾಗಿಯೇ ಹೊರತು ಕೇವಲ ಲಾಭಕ್ಕಾಗಿ ಅಲ್ಲ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಂಗಳೂರು ಫಾದರ್ ಮುಲ್ಲರ್ಸ್‌ ಆಸ್ಪತ್ರೆಯ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ವಂ.ಫೌಸ್ಟಿನ್ ಲೂಕಸ್ ಲೋಬೋ ಮಾತನಾಡಿದರು.

ಕಟಪಾಡಿಯ ಹಿರಿಯ ವೈದ್ಯ ಡಾ.ಎ.ರವೀಂದ್ರನಾಥ ಶೆಟ್ಟಿ, ಕಟಪಾಡಿ ಗ್ರಾಪಂನ ಮಾಜಿ ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ, ಕಟಪಾಡಿಯ ಉದ್ಯಮಿ ಇಕ್ಬಾಲ್ ಶಂಸುದ್ದೀನ್, ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರಶಾಂತ್ ಜತ್ತನ್ನ, ಅಂಬಾಡಿ ಸಿಎಸ್‌ಐ ಕ್ರಿಸ್ಟ್ ಚರ್ಚ್‌ನ ರೆ.ಅಕ್ಷಯ್ ಅಮ್ಮನ್ನ, ಸಿಎಸ್‌ಐ ಕೆಎಸ್‌ಡಿ ಅಸೋಸಿಯೇಟ್ ಸೆಕ್ರಟರಿ ಸ್ಟಿಫನ್ ಕರ್ಕಡ ಉಪಸ್ಥಿತರಿದ್ದರು.

ಸಿಎಸ್‌ಐ ಕೆಎಸ್‌ಡಿ ರೆ.ಖಜಾಂಚಿ ಐವಾನ್ ಡಿಸೋನ್ಸ್ ಹಾಗೂ ಉಡುಪಿ ಏರಿಯಾ ಚೇಯರ್‌ಮೆನ್ ರೆ.ಕಿಶೋರ್ ಕುಮಾರ್ ಪ್ರಾರ್ಥನೆ ನೆರವೇರಿಸಿದರು. ಎಲ್‌ಎಂಸಿಓಎನ್ ಪ್ರಾಂಶುಪಾಲೆ ಡಾ.ಸುಜ ಕರ್ಕಡ ಸ್ವಾಗತಿಸಿದರು. ಎಲ್‌ಎಂಎಸ್‌ಓಎನ್ ಪ್ರಾಂಶುಪಾಲೆ ವೀಣಾ ಮೆನೇಜಸ್ ವಂದಿಸಿದರು. ನರ್ಸಿಂಗ್ ಟ್ಯೂಟರ್ ಹೇಮಲತಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.


Dailyhunt
Disclaimer: This content has not been generated, created or edited by Dailyhunt. Publisher: Varthabharathi