Thursday, 29 Oct, 8.56 pm ವಾರ್ತಾಭಾರತಿ

ಮುಖಪುಟ
ಕೇರಳ ಚಿನ್ನ ಸ್ಮಗ್ಲಿಂಗ್ ಪ್ರಕರಣ: ಶಿವಶಂಕರ್ 7 ದಿನ ಕಸ್ಟಡಿಗೆ

ತಿರುವನಂತಪುರ, ಅ.29: ಕೇರಳ ಚಿನ್ನ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಅಮಾನತುಗೊಂಡ ಐಎಎಸ್ ಅಧಿಕಾರಿ ಎಂ. ಶಿವಶಂಕರ್‌ರನ್ನು ಗುರುವಾರ ಬೆಳಿಗ್ಗೆ ಎರ್ನಾಕುಳಂನ ಪ್ರಧಾನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು 7 ದಿನ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಶಿವಶಂಕರ್‌ರನ್ನು 14 ದಿನ ಕಸ್ಟಡಿಗೆ ಪಡೆಯಲು ಅನುಮತಿ ಕೋರಿದ್ದರೂ, ನ್ಯಾಯಾಲಯ 7 ದಿನದ ಕಸ್ಟಡಿಗೆ ಸಮ್ಮತಿಸಿದೆ. ಇವರನ್ನು ಬುಧವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top