Dailyhunt Logo
  • Light mode
    Follow system
    Dark mode
    • Play Story
    • App Story
Keralam |16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸರಣಿ ಪೋಕ್ಸೊ ಆರೋಪಿ ಮಹಿಳೆಯ ಬಂಧನ

Keralam |16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸರಣಿ ಪೋಕ್ಸೊ ಆರೋಪಿ ಮಹಿಳೆಯ ಬಂಧನ

ಕಾಸರಗೋಡು: 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ 25 ವರ್ಷದ ಮಹಿಳೆಯೊಬ್ಬರನ್ನು ಮೆಲ್ಪರಾಂಬ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುಮಾರು ಒಂದೂವರೆ ತಿಂಗಳ ಬಳಿಕ ಆಕೆಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ.

ಆರೋಪಿಯನ್ನು ಕಣ್ಣೂರು ಜಿಲ್ಲೆಯ ತಾಲಿಪರಾಂಬ ಬಳಿಯ ಪುಲ್ಲಿಪರಾಂಬ ಗ್ರಾಮದ ನಿವಾಸಿ ಸ್ನೇಹ ಮೆರ್ಲಿನ್ ಎಂದು ಗುರುತಿಸಲಾಗಿದೆ.

ದೂರಿನ ಕುರಿತು ತನಿಖೆ ಕೈಗೊಂಡ ಬಳಿಕ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ, ಆಕೆಯನ್ನು ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಲ್ಪರಾಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆರ್ಲಿನ್ ಎಂಬ ಆರೋಪಿ ಮಹಿಳೆಯು ಬಾಲಕಿಯ ಮನೆಯಲ್ಲಿ ಉಳಿದಿದ್ದಾಗ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಹಿಳೆಯು ಬಾಲಕಿಯ ತಾಯಿಗೆ ಪರಿಚಿತಳಾಗಿದ್ದು, ಬಾಲಕಿಯ ತಾಯಿಯನ್ನು ಮಾದಕ ವಸ್ತುಗಳ ಪ್ರಕರಣದಲ್ಲಿ ಬಂಧಿಸಲಾಗಿದೆ. ಆಕೆಯೀಗ ಕಣ್ಣೂರು ಮಹಿಳಾ ಕಾರಾಗೃಹದಲ್ಲಿದ್ದಾಳೆ ಎಂದು ಅವರು ಹೇಳಿದ್ದಾರೆ.

ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಆಧರಿಸಿ ಪೋಕ್ಸೊ ಕಾಯ್ದೆಯ ನಿಯಮಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿ ಮೆರ್ಲಿನ್ ವಿರುದ್ಧ ಈಗಾಗಲೇ ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಪೋಕ್ಸೊ ಕಾಯ್ದೆಯಡಿ ಆಕೆಯ ವಿರುದ್ಧ ದಾಖಲಾಗಿರುವ ನಾಲ್ಕನೆಯ ಪ್ರಕರಣ ಇದಾಗಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಪ್ರಕರಣ ತಕ್ಷಣವೇ ಬೆಳಕಿಗೆ ಬಂದಿಲ್ಲ. ಸಂತ್ರಸ್ತ ಬಾಲಕಿಯನ್ನು ಆಪ್ತ ಸಮಾಲೋಚನೆಗೊಳಪಡಿಸಿದ ಬಳಿಕ, ಆಕೆ ಈ ವಿಷಯವನ್ನು ಬಹಿರಂಗಪಡಿಸಿದ್ದಾಳೆ. ಇದಾದ ಬಳಿಕ ಅಧಿಕೃತ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಭಯದಿಂದಾಗಿ ತಿಂಗಳಾನುಗಟ್ಟಲೆ ಈ ವಿಷಯದ ಕುರಿತು ಮೌನ ವಹಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi