Wednesday, 27 Jan, 6.44 pm ವಾರ್ತಾಭಾರತಿ

ಕರಾವಳಿ
ಕೆಸಿಎಫ್ ಕುವೈತ್ ವತಿಯಿಂದ ಗಣರಾಜ್ಯೋತ್ಸವ

ಕುವೈತ್ : ಕೆಸಿಎಫ್ ಕುವೈತ್ ಇದರ ವತಿಯಿಂದ ಸಾಮಾಜಿಕ ಜಾಲತಾಣ ಝೂಮ್ ಮೂಲಕ ಕೆಸಿಎಫ್ ಕುವೈತ್ ರಾಷ್ಟ್ರೀಯ ಅಧ್ಯಕ್ಷ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ ಬೈಲ್ ಅಧ್ಯಕ್ಷತೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಕುವೈತ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷ ಬಾದುಶ ಸಖಾಫಿ ಉದ್ಘಾಟಿಸಿದರು. ಮುಖ್ಯ ಪ್ರಭಾಷಣಕಾರರಾಗಿ ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಶೌಕತ್ ನಹೀಮಿ ಅಲ್ ಬುಖಾರಿ ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು.

ಕೆಸಿಎಫ್ ಕುವೈತ್ ರಾಷ್ಟ್ರೀಯ ಸಾಂತ್ವಾನ ಅಧ್ಯಕ್ಷ ಯಾಕೂಬ್ ಕಾರ್ಕಳ, ಕೆಸಿಎಫ್ ಕುವೈತ್ ಸೌತ್ ಝೋನ್ ಕಾರ್ಯದರ್ಶಿ ಶಾಹುಲ್ ಹಮೀದ್ ಸಅದಿ ಝುಹ್ರಿ, ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ಅಧ್ಯಕ್ಷ ಉಮರ್ ಝುಹ್ರಿ ಆಶಂಷಗೈದರು.

ಕೆಸಿಎಫ್ ಕುವೈತ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷ ಹುಸೈನ್ ಎರ್ಮಾಡ್ ಕಾರ್ಯಕ್ರಮ ನಿರೂಪಿಸಿದರು. ಕೆಸಿಎಫ್ ಕುವೈತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಕರಿಯಾ ಆನೆಕಲ್ ಸ್ವಾಗತಿಸಿದರು. ಕೆಸಿಎಫ್ ಕುವೈತ್ ರಾಷ್ಟ್ರೀಯ ಶಿಕ್ಷಣ ಕಾರ್ಯದರ್ಶಿ ಮುಸ್ತಫ ಉಳ್ಳಾಲ ವಂದಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top