Saturday, 23 Jan, 10.31 pm ವಾರ್ತಾಭಾರತಿ

ರಾಷ್ಟೀಯ
ಕೊರೋನ: 14,256 ಹೊಸ ಪ್ರಕರಣ ದಾಖಲು

ಹೊಸದಿಲ್ಲಿ, ಜ.23: ಶನಿವಾರ ಬೆಳಗ್ಗಿನವರೆಗಿನ 24 ಗಂಟೆ ಅವಧಿಯಲ್ಲಿ ದೇಶದಲ್ಲಿ ಕೊರೋನ ಸೋಂಕಿನ 14,256 ಹೊಸ ಪ್ರಕರಣ ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,06,39,684ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ದೇಶದಲ್ಲಿ ಪ್ರಸ್ತುತ 1,86,662 ಸಕ್ರಿಯ ಪ್ರಕರಣಗಳಿದ್ದು ಚೇತರಿಕೆ ಪ್ರಮಾಣ 96.81%ಕ್ಕೇರಿದೆ. ಶನಿವಾರ ಬೆಳಗ್ಗಿನವರೆಗಿನ 24 ಗಂಟೆ ಅವಧಿಯಲ್ಲಿ 152 ಜನ ಕೊರೋನ ಸೋಂಕಿನಿಂದ ಮೃತಪಟ್ಟಿದ್ದು ಒಟ್ಟು ಮೃತರ ಸಂಖ್ಯೆ 1,53,184ಕ್ಕೇರಿದೆ. ದೇಶದಲ್ಲಿ ಕೊರೋನ ಸೋಂಕಿನ ಮರಣ ಪ್ರಮಾಣ 1.44% ಆಗಿದೆ ಎಂದು ಇಲಾಖೆಯ ಅಂಕಿಅಂಶ ಹೇಳಿದೆ. ದೇಶದಲ್ಲಿ ಶುಕ್ರವಾರ 8,37,095 ಸ್ಯಾಂಪಲ್ ಪರೀಕ್ಷಿಸಲಾಗಿದ್ದು ಇದರೊಂದಿಗೆ ಒಟ್ಟು 19,09,85,119 ಸ್ಯಾಂಪಲ್‌ಗಳ ಪರೀಕ್ಷೆ ನಡೆಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಹೇಳಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top