Monday, 01 Mar, 12.01 am ವಾರ್ತಾಭಾರತಿ

ರಾಷ್ಟೀಯ
ಕೊರೋನ ಮುಕ್ತ ರಾಜ್ಯವಾಗಿ ಹೊರಹೊಮ್ಮಿದ ಅರುಣಾಚಲಪ್ರದೇಶ

ಇಟಾನಗರ: ಕೊರೋನ ಸೋಂಕಿತ ಕೊನೆಯ ಮೂವರು ಗುಣಮುಖ ರಾಗುವುದರೊಂದಿಗೆ ಅರುಣಾಚಲ ಪ್ರದೇಶ ರವಿವಾರ ಕೊರೋನ ಸೋಂಕು ಮುಕ್ತ ರಾಜ್ಯವಾಗಿ ಹೊರ ಹೊಮ್ಮಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಅರುಣಾಚಲಪ್ರದೇಶದಲ್ಲಿ ಒಟ್ಟು ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 16,836 ಹಾಗೂ ಗುಣಮುಖರಾದವರ ಸಂಖ್ಯೆ 16.780 ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಕೊರೋನ ಸೋಂಕಿನಿಂದಾಗಿ ಒಟ್ಟು 56 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಕಣ್ಗಾವಲು ಅಧಿಕಾರಿ ಲೊಬ್ಸಂಗ್ ಜಂಪಾ ಅವರು ಹೇಳಿದ್ದಾರೆ.

ಅರುಣಾಚಲಪ್ರದೇಶದ ಗುಣಮುಖರಾದವರ ಹಾಗೂ ಪಾಸಿಟಿವ್ ಪ್ರಕರಣಗಳ ಪ್ರಮಾಣ ಶೇ. 99.66 ಹಾಗೂ 0. ಇದಲ್ಲದೆ, ಶನಿವಾರ 312 ಸೇರಿದಂತೆ ಒಟ್ಟು 4,05,647 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ, ರಾಜ್ಯದಲ್ಲಿ ಇದುವರೆಗೆ 32,325 ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರು ಕೊರೋನ ಲಸಿಕೆ ಸ್ವೀಕರಿಸಿದ್ದಾರೆ ಎಂದು ರಾಜ್ಯ ರೋಗ ನಿರೋಧಕ ಲಸಿಕೆ ವಿತರಣೆ ಕಾರ್ಯಕ್ರಮದ ಅಧಿಕಾರಿ ದಿಮೋಂಗ್ ಪಡುಂಗ್ ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top