Saturday, 24 Apr, 9.53 pm ವಾರ್ತಾಭಾರತಿ

ಮುಖಪುಟ
ಕೊರೋನ ವೈರಸ್: ರಾಜ್ಯಾದ್ಯಂತ 29 ಸಾವಿರ ಮಂದಿಗೆ ಪಾಸಿಟಿವ್, 208 ಸೋಂಕಿತರು ಸಾವು

ಬೆಂಗಳೂರು, ಎ.24: ರಾಜ್ಯದಲ್ಲಿ ಶನಿವಾರ 29,438 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 208 ಜನರು ಸೋಂಕಿಗೆ ಬಲಿಯಾಗಿದ್ದು, 9,058 ಜನರು ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 13,04,397ಕ್ಕೆ ತಲುಪಿದ್ದು, 1,280 ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 14,283ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 2,34,483ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

208 ಸೋಂಕಿತರ ಸಾವು: ಬಳ್ಳಾರಿ 3, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 149, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ದಕ್ಷಿಣ ಕನ್ನಡ-2, ದಾವಣಗೆರೆ-2, ಧಾರವಾಡ 5, ಹಾಸನ 2, ಹಾವೇರಿ 3, ಕಲಬುರಗಿ 8, ಕೊಡಗು-2, ಕೋಲಾರ 6, ಮಂಡ್ಯ 3, ಮೈಸೂರು 4, ರಾಯಚೂರು-2, ಶಿವಮೊಗ್ಗ 3, ತುಮಕೂರು 3, ಉತ್ತರ ಕನ್ನಡ-2, ವಿಜಯಪುರ 2 ಸಾವು ಪ್ರಕರಣ ವರದಿಯಾಗಿದೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 29,438 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 105, ಬಳ್ಳಾರಿ 731, ಬೆಳಗಾವಿ 313, ಬೆಂಗಳೂರು ಗ್ರಾಮಾಂತರ 684, ಬೆಂಗಳೂರು ನಗರ 17,342, ಬೀದರ್ 365, ಚಾಮರಾಜನಗರ 295, ಚಿಕ್ಕಬಳ್ಳಾಪುರ 506, ಚಿಕ್ಕಮಗಳೂರು 185, ಚಿತ್ರದುರ್ಗ 114, ದಕ್ಷಿಣಕನ್ನಡ 517, ದಾವಣಗೆರೆ 254, ಧಾರವಾಡ 385, ಗದಗ 76, ಹಾಸನ 823, ಹಾವೇರಿ 92, ಕಲಬುರಗಿ 791, ಕೊಡಗು 196, ಕೋಲಾರ 373, ಕೊಪ್ಪಳ 266, ಮಂಡ್ಯ 688, ಮೈಸೂರು 536, ರಾಯಚೂರು 497, ರಾಮನಗರ 385, ಶಿವಮೊಗ್ಗ 266, ತುಮಕೂರು 1,559, ಉಡುಪಿ 403, ಉತ್ತರಕನ್ನಡ 185, ವಿಜಯಪುರ 411, ಯಾದಗಿರಿ ಜಿಲ್ಲೆಯಲ್ಲಿ 95 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ ಕೊರೋನ ಸೋಂಕಿಗೆ 149 ಸಾವು

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 17,342 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 149 ಸೋಂಕಿತರು ಮೃತಪಟ್ಟಿದ್ದಾರೆ. 4,646 ಸೋಂಕಿತರು ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 6,32,923 ಕೊರೋನ ಸೋಂಕಿತರು ದೃಢಪಟ್ಟಿದ್ದು, 5,723 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸೇರಿದಂತೆ ಒಟ್ಟು 162171 ಪ್ರಕರಣಗಳಿದ್ದು, ಅವರೆಲ್ಲರೂ ಕೋವಿಡ್ ನಿಗದಿತ ಆಸ್ಪತ್ರೆಗಳು, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top