ಹೊಸದಿಲ್ಲಿ, ಮೇ 22: ಅತ್ಯಂತ ವಿನಾಶಕಾರಿಯಾಗಿರುವ ಕೋವಿಡ್ ಸೋಂಕಿನ 2ನೇ ಅಲೆಯಲ್ಲಿ ಇದುವರೆಗೆ ಒಟ್ಟು 420 ವೈದ್ಯರು ಮೃತರಾಗಿದ್ದು ದಿಲ್ಲಿಯಲ್ಲೇ 100 ವೈದ್ಯರು ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮಂಡಳಿ(ಐಎಂಎ) ವರದಿ ಮಾಡಿದೆ. ಬಿಹಾರದಲ್ಲಿ ಕನಿಷ್ಟ 96 ವೈದ್ಯರು, ಉತ್ತರಪ್ರದೇಶದಲ್ಲಿ 41 ವೈದ್ಯರು ಮೃತಪಟ್ಟಿರುವುದಾಗಿ ಐಎಂಎ ಹೇಳಿದೆ. ಕಳೆದ ವಾರ ಐಎಂಎ ಮಾಜಿ ಅಧ್ಯಕ್ಷ ಡಾ. ಕೆಕೆ ಅಗರ್ವಾಲ್ ಕೊರೋನ ಸೋಂಕಿನಿಂದ ಮೃತರಾಗಿದ್ದರು. ಐಎಂಎ ದಾಖಲೆ ಪ್ರಕಾರ ಸೋಂಕಿನ ಪ್ರಥಮ ಅಲೆಯಲ್ಲಿ ದೇಶದಾದ್ಯಂತ 748 ವೈದ್ಯರು ಮೃತಪಟ್ಟಿದ್ದಾರೆ ಎಂದು ಐಎಂಎ ಹೇಳಿದೆ.
ದೇಶದ ಜನತೆಗೆ, ಅದರಲ್ಲೂ ಮುಖ್ಯವಾಗಿ ಮುಂಚೂಣಿ ಕಾರ್ಯಕರ್ತರಾದ ಆರೋಗ್ಯಕ್ಷೇತ್ರದವರಿಗೆ ಸೋಂಕಿನ ಎರಡನೇ ಅಲೆ ಅತ್ಯಂತ ಮಾರಣಾಂತಿಕವಾಗಿ ಪರಿಣಮಿಸಿದೆ ಎಂದು ಐಎಂಎ ಅಧ್ಯಕ್ಷ ಡಾ.

