ಫೋಟೊ ಕೃಪೆ: //twitter.com/sarkarimirrorr
ಹೊಸದಿಲ್ಲಿ,ಮೇ 9: ಕೋವಿಡ್-19 ಎರಡನೇ ಅಲೆಯ ಈ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ,ರಕ್ಷಣೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಬಾಲನ್ಯಾಯ ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾ.ಎಸ್.ರವೀಂದ್ರ ಭಟ್ ಅವರು ಒತ್ತಿ ಹೇಳಿದರು.
ಯುನಿಸೆಫ್ ನ ಸಮನ್ವಯದೊಂದಿಗೆ ಸಮಿತಿಯು ನಡೆಸಿದ ಪುನರ್ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಕೋವಿಡ್-19 ರಿಂದಾಗಿ ತಮ್ಮ ತಂದೆ ಅಥವಾ ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳಿದ್ದಾರೆ. ಹೆತ್ತವರು ಆಸ್ಪತ್ರೆಗಳಲ್ಲಿ ಅಥವಾ ವೈದ್ಯಕೀಯ ನಿಗಾದಲ್ಲಿರುವುದರಿಂದ ಅವರ ರಕ್ಷಣೆಯಿಂದ ಮಕ್ಕಳು ವಂಚಿತರಾಗಿರುವ ಪ್ರಕರಣಗಳೂ ಇವೆ. ಇಂತಹ ಮಕ್ಕಳು ಈಗ ಹಿಂದೆಂದಿಗಿಂತಲೂ ಹೆಚ್ಚು ಸೋಂಕಿಗೆ ಗುರಿಯಾಗುವ ಅಪಾಯದಲ್ಲಿದ್ದಾರೆ.

