Dailyhunt

ಲಾಕ್‌ಡೌನ್: 49 ವಾಹನಗಳು ಪೊಲೀಸ್ ವಶ

ಉಡುಪಿ, ಜೂ.2: ಜಿಲ್ಲೆಯಲ್ಲಿ ಕಳೆದ 24ಗಂಟೆಗಳ ಅವಧಿಯಲ್ಲಿ ಅನಗತ್ಯ ವಾಗಿ ಸಂಚರಿಸುತ್ತಿದ್ದ 44 ದ್ವಿಚಕ್ರ ವಾಹನ, 9 ಕಾರು ಗಳು ಸೇರಿದಂತೆ ಒಟ್ಟು 49 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಡುಪಿ ಉಪವಿಭಾಗ ವ್ಯಾಪ್ತಿಯಲ್ಲಿ 17 ದ್ವಿಚಕ್ರ ವಾಹನ, ಮೂರು ಕಾರು, ಕಾರ್ಕಳದಲ್ಲಿ 3 ದ್ವಿಚಕ್ಞರ ವಾಹನ, ಕುಂದಾಪುರ ಉಪವಿಭಾಗದಲ್ಲಿ 24 ದ್ವಿಚಕ್ರವಾಹನಗಳು ಮತ್ತು ಆರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಉಡುಪಿಯಲ್ಲಿ ನಾಲ್ಕು ಮತ್ತು ಕುಂದಾಪುರದಲ್ಲಿ ಒಂದು ಸೇರಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi