Dailyhunt
ಮಚ್ಚಟ್ಟು: ಮನೆ ಮೇಲೆ ಮರ ಬಿದ್ದು ಅಪಾರ ಹಾನಿ

ಮಚ್ಚಟ್ಟು: ಮನೆ ಮೇಲೆ ಮರ ಬಿದ್ದು ಅಪಾರ ಹಾನಿ

ಡುಪಿ, ಎ.3: ಜಿಲ್ಲೆಯ ಅನೇಕ ಕಡೆಗಳಲ್ಲಿ ಮುಂಗಾರು ಪೂರ್ವ ಮಳೆ ಗಾಳಿ, ಗುಡುಗು-ಮಿಂಚಿನೊಂದಿಗೆ ಸುರಿಯುತ್ತಿದೆ. ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ರಾಜು ನಾಯ್ಕ್ ಎಂಬವರ ವಾಸ್ತವ್ಯದ ಕಚ್ಛಾ ಮನೆ ಮೇಲೆ ಭಾರೀ ಮರವೊಂದು ಬಿದ್ದು ಮನೆ ಸಂಪೂರ್ಣ ಹಾನಿಗೊಂಡಿದೆ.

ಇದರಿಂದ 1.50ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯ ಹೆಬ್ರಿಯಲ್ಲಿ 13.6ಮಿ.ಮೀ ಮಳೆ ಸುರಿದಿದೆ. ಅಲ್ಲದೇ ಬೈಂದೂರಿನಲ್ಲಿ 9.8ಮಿ.ಮೀ., ಕುಂದಾಪುರದಲ್ಲಿ 8.4, ಉಡುಪಿಯಲ್ಲಿ 3.3, ಬ್ರಹ್ಮಾವರದಲ್ಲಿ 3.2 ಹಾಗೂ ಕಾರ್ಕಳದಲ್ಲಿ 1.6ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi