Dailyhunt
ಮಧ್ಯಪ್ರಾಚ್ಯ ಸಂಘರ್ಷ | ಇರಾನ್ 'ಹಿಟ್‌ಲಿಸ್ಟ್'ನಲ್ಲಿ ಗಲ್ಫ್‌ನ 8 ಸೇತುವೆಗಳು

ಮಧ್ಯಪ್ರಾಚ್ಯ ಸಂಘರ್ಷ | ಇರಾನ್ 'ಹಿಟ್‌ಲಿಸ್ಟ್'ನಲ್ಲಿ ಗಲ್ಫ್‌ನ 8 ಸೇತುವೆಗಳು

ಟೆಹ್ರಾನ್, ಎ.3: ಕರಾಜ್‌ ನ B1 ಸೇತುವೆಯ ಮೇಲೆ ಗುರುವಾರ ನಡೆದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಗಲ್ಫ್ ಪ್ರದೇಶದ ಪ್ರಮುಖ ಸೇತುವೆಗಳನ್ನು 'ಹಿಟ್‌ಲಿಸ್ಟ್'ನಲ್ಲಿ ಸೇರಿಸಲಾಗಿದೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ.

ಕುವೈತ್, ಬಹ್ರೇನ್, ಸೌದಿ ಅರೇಬಿಯಾ, ಯುಎಇ ಮತ್ತು ಜೋರ್ಡನ್ ದೇಶಗಳ ಸೇತುವೆಗಳನ್ನು ಇರಾನ್ ಗುರಿಯಾಗಿಸಿದೆ ಎಂದು ವರದಿ ತಿಳಿಸಿದೆ.

ಗುರುವಾರ ಇರಾನ್‌ನ ಕರಾಜ್ ನಗರದಲ್ಲಿರುವ B1 ಸೇತುವೆಯ ಮೇಲೆ ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಭಾರೀ ಹಾನಿಯಾಗಿದೆ. ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಈ ದಾಳಿಯನ್ನು ಖಂಡಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, "ಅಪೂರ್ಣ ಸೇತುವೆಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದರಿಂದ ಇರಾನಿಯನ್ನರನ್ನು ಶರಣಾಗತಿಗೆ ಒತ್ತಾಯಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi