Dailyhunt Logo
  • Light mode
    Follow system
    Dark mode
    • Play Story
    • App Story
ಮಹಿಳೆಯ ಮೃತದೇಹ ತಿಂದ ಇಲಿಗಳು; ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಕುಟುಂಬಿಕರ ಪ್ರತಿಭಟನೆ

ಮಹಿಳೆಯ ಮೃತದೇಹ ತಿಂದ ಇಲಿಗಳು; ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಕುಟುಂಬಿಕರ ಪ್ರತಿಭಟನೆ

ಮೊಹಾಲಿ, ಆ. 1: ನಿವೃತ್ತ ಸೇನಾ ಕರ್ನಲ್‌ರ ಮೃತ ಪತ್ನಿಯ ಮುಖ ಹಾಗೂ ಕಿವಿಗಳನ್ನು ಇಲಿಗಳು ತಿಂದು ಹಾಕಿದ ಘಟನೆ ದೆರೇಬಸ್ಸಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದೆ. ಸೇನೆಯ ನಿವೃತ್ತ ಕರ್ನಲ್ ಅಮರ್‌ಜೀತ್ ಸಿಂಗ್ ಅವರ ಪತ್ನಿ ಜಸ್‌ಜೋತ್ ಕೌರ್ (52) ಅವರ ಗುರುವಾರ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.

ಮಹಿಳೆಯ ಮೃತದೇಹವನ್ನು ಇಲಿಗಳು ತಿಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯ ವಿರೋಧಿಸಿ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದರು. ಕೂಡಲೇ ಪೊಲೀಸರು ಹಾಗೂ ತಹಶೀಲ್ದಾರರು ಆಗಮಿಸಿದರು. ಆಸ್ಪತ್ರೆಯ ನಿರ್ಲಕ್ಷದ ಬಗ್ಗೆ ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ ಬಳಿಕ ಮಹಿಳೆಯ ಸಂಬಂಧಿಕರು ಪ್ರತಿಭಟನೆ ನಿಲ್ಲಿಸಿದರು. ಅನಂತರ ಸ್ಥಳೀಯ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದುಕೊಂಡರು.

ಬಳಿಕ ದೇರಾಬಸ್ಸಿ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ದು ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi