Dailyhunt Logo
  • Light mode
    Follow system
    Dark mode
    • Play Story
    • App Story
ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಜಿಲ್ಲಾದ್ಯಕ್ಷರಾಗಿ ಹಸೈನಾರ್ ಆನೆಮಹಾಲ್ ಆಯ್ಕೆ

ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಜಿಲ್ಲಾದ್ಯಕ್ಷರಾಗಿ ಹಸೈನಾರ್ ಆನೆಮಹಾಲ್ ಆಯ್ಕೆ

ಹಾಸನ: ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಜಿಲ್ಲಾದ್ಯಕ್ಷರಾಗಿ ಹಸೈನಾರ್ ಆನೆಮಹಾಲ್ ಆಯ್ಕೆಯಾಗಿದ್ದಾರೆ.

ಗೌರವದ್ಯಾಕ್ಷರಾಗಿ ಜಮಾಲ್ ಬೇಲೂರು, ಉಪಾಧ್ಯಕ್ಷರಾಗಿ ಫಾರೂಖ್ ಶಾಮಿಯಾನ ಸಕಲೇಶಪುರ, ಆರೀಫ್ ಹಾಸನ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಲೀಂ ಹಾಸನ, ಸಹಕಾರ್ಯದರ್ಶಿಗಳಾಗಿ ಪರ್ವೀಝ್ ನೂರಿ ಅರಸಿಕೇರೆ, ಮುಝಮಿಲ್ ಹಾಸನ, ಖಜಾಂಚಿಯಾಗಿ ಆರೀಫ್ ರೋಶನ್. ಜಿಲ್ಲಾ ಸಂಚಾಲಕರಾಗಿ ಮಲ್ನಾಡ್ ಮೆಹಬೂಬ್, ಕಾನೂನು ಸಲಹೆಗಾರರಾಗಿ ಹನ್ಶದ್ ಪಾಳ್ಯ ಆಯ್ಕೆಯಾದರು.

ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಕೇಂದ್ರ ಸಮಿತಿ ಅಧ್ಯಕ್ಷ ಮುಹಮ್ಮದ್ ಶರೀಫ್, ಗೌರವ ಅಧ್ಯಕ್ಷ ಬಶೀರ್ ಬಾಳ್ಳುಪೇಟೆ, ಸಲಹೆಗಾರ
ಮುಹಮ್ಮದ್ ಫಾರೂಕ್, ಜುಡಾನ್ ವಲಯ ಅಧ್ಯಕ್ಷ ಅಹಮ್ಮದ್ ಸಲಿಂ, ಜುಬೈಲ್ ವಲಯ ಅಧ್ಯಕ್ಷ ಅಹ್ಮದ್ ಶಮೀಮ್, ರಿಯಾದ್ ವಲಯ ಅಧ್ಯಕ್ಷ ಜುನೈದ್ ಇಸ್ಮಾಯಿಲ್, ಜಿದ್ದಾ ವಲಯ ಅಧ್ಯಕ್ಷ ಮುಷ್ತಾಕ್ ಅಹಮದ್, ದಮಾಮ್ ವಲಯ ಸಮಿತಿ ಖಜಾಂಚಿ ಆಸೀಫ್ ಬೇಲೂರು ನೂತನ ಸಮಿತಿಗೆ ಶುಭಾಶಯ ಸಲ್ಲಿಸಿದ್ದಾರೆ.

ಆನ್‌ಲೈನ್ ಮೂಲಕ ನಡೆದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಸಮೀರ್ ಸ್ವಾಗತಿಸಿದರೆ, ಸಂಸ್ಥೆಯ ಪರಿಚಯವನ್ನು ಬಶೀರ್ ಬಾಳ್ಳುಪೇಟೆ, ಪ್ರಾರ್ಥನೆಯನ್ನು ಮಹಮ್ಮದ್ ಶರೀಫ್ ನಿಬ್ಜಿ ಹಾಗೂ ಖಲಂದರ್ ಶಾಫಿ ಜೈನಿ ನೆರವೇರಿಸಿದರು. ಜಲಾಲ್ ಬೇಗ್ ವಂದಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi