Dailyhunt Logo
  • Light mode
    Follow system
    Dark mode
    • Play Story
    • App Story
'ಮನ್ ಕೀ ಬಾತ್' ರಾಜ್ಯ ಮಟ್ಟದ ನೇರ ಪ್ರಸಾರ ವೀಕ್ಷಣೆ

'ಮನ್ ಕೀ ಬಾತ್' ರಾಜ್ಯ ಮಟ್ಟದ ನೇರ ಪ್ರಸಾರ ವೀಕ್ಷಣೆ

ಡುಪಿ, ಜೂ.1: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕೀ ಬಾತ್' ಕಾರ್ಯಕ್ರಮದ 134ನೇ ಅವೃತ್ತಿಯ ರಾಜ್ಯ ಮಟ್ಟದ ನೇರ ಪ್ರಸಾರದ ವೀಕ್ಷಣೆಯು ಮೇ 31ರಂದು ಅಧಿಕೃತ ವೀಕ್ಷಣಾ ಕೇಂದ್ರ ಉಡುಪಿ ಕಕ್ಕುಂಜೆಯ ಪಾಸ್ಟರಲ್ ಸೆಂಟರ್ 'ಅನುಗ್ರಹ'ದಲ್ಲಿ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಸಂಯೋಜನೆಯಲ್ಲಿ ವಿವಿಧ ಚರ್ಚ್‌ಗಳ ಧರ್ಮಗುರುಗಳು, ಭಗಿನಿಯರು ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರಮುಖರ ಉಪಸ್ಥಿತಿ ಯಲ್ಲಿ ಮನ್ ಕೀ ಬಾತ್ ವೀಕ್ಷಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ಕಿರ್ಶೋ ಕುಮಾರ್ ಬೊಟ್ಯಾಡಿ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನಿಲ್ ತೋಮಸ್, ಜಿಲ್ಲಾಧ್ಯಕ್ಷ ರುಡಾಲ್ಫ್ ಡಿಸೋಜ, ಮುಖಂಡರಾದ ಕೆ.ಉದಯ ಕುಮಾರ್ ಶೆಟ್ಟಿ, ಜೆಸೇಲ್ ಡಿಸೋಜ, ಶಿಲ್ಪಾ ಜಿ.ಸುವರ್ಣ, ಶ್ಯಾಮಲಾ ಎಸ್.ಕುಂದರ್, ಶಿವಕುಮಾರ್ ಅಂಬಲಪಾಡಿ, ಕಲ್ಯಾಣ ಪುರ ಚರ್ಚಿನ ಫಾ.ಫ್ರಾನ್ಸಿಸ್ ಲೂಯಿಸ್, ಫಾಸ್ಟರಲ್ ಸೆಂಟರ್ ನಿರ್ದೇಶಕ ಫಾ.ವಿನ್ಸೆಂಟ್ ಕ್ರಾಸ್ಟ, ಸಂಪದ ಸಂಚಾಲಕ ಫಾ.ರೆಜಿನಾಲ್ಡ್, ಸಾಸ್ತಾನ ಚರ್ಚಿನ ಫಾ.ಸುನೀಲ್, ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಮೆಲ್ವಿನ್ ಅರಾನ್ಹ ಮೊದಲಾದವರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi