Dailyhunt Logo
  • Light mode
    Follow system
    Dark mode
    • Play Story
    • App Story
ಮೀಲಾದುನ್ನಬಿ : ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯಿಂದ ಶ್ರಮದಾನ

ಮೀಲಾದುನ್ನಬಿ : ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯಿಂದ ಶ್ರಮದಾನ

ಉಳ್ಳಾಲ : ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಇದರ ಆಶ್ರಯದಲ್ಲಿ ಉಳ್ಳಾಲ ನಗರ ಸಭೆಯ ಸಹಯೋಗದಲ್ಲಿ ಮೀಲಾದುನ್ನಬಿ ಪ್ರಯುಕ್ತ ರಾಜ್ಯ ವ್ಯಾಪ್ತಿ ಹಮ್ಮಿಕೊಂಡ ಅಭಿಯಾನದ ಅಂಗವಾಗಿ ಬಬ್ಬುಕಟ್ಟೆ ಹಿರಾ ನಗರ ದಲ್ಲಿ ಶ್ರಮಾದಾನ ಕಾರ್ಯಕ್ರಮವು ಗುರುವಾರ ನಡೆಯಿತು.

ಕಾರ್ಯಕ್ರಮವನ್ನು ಉಳ್ಳಾಲ ನಗರ ಸಭೆ ಕೌನ್ಸಿಲರ್ ಮುಶ್ತಾಕ್ ಪಟ್ಲ ಉದ್ಘಾಟಿಸಿ ದರು.

ಜಮಾಅತೆ ಇಸ್ಲಾಮಿ ಹಿಂದ್ ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್ ಸಂದೇಶ ನೀಡಿ ಶ್ರಮಾದಾನ ನಿಮಗೆ ಪ್ರೇರಣೆ ಯಾಗಿದ್ದು ಪ್ರವಾದಿ ಯವರು ಕಲಿಸಿದ ಶಿಕ್ಷಣ ಆಗಿದೆ ಎಂದು ಹೇಳಿದರು.

ಅಬ್ದುಲ್ ಸಲಾಂ ಸಿ.ಹೆಚ್. ಮಾರ್ಗ ದರ್ಶನ ನೀಡಿದರು. ಉಪಾಧ್ಯಕ್ಷ ಅಬ್ದುಲ್ ರಹೀಂ , ಪುರಸಭೆ ಮಾಜಿ ಕೌನ್ಸಿಲರ್ ಸುಹಾಸಿನಿ, ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಸ್ಟೂಡೆಂಟ್ ಇಸ್ಲಾಂ ಆರ್ಗನೈಶೇಷನ್ ನ ನಿಝಾಂ ಉಪಸ್ಥಿತರಿದ್ದರು.

ಕಾರ್ಯದರ್ಶಿ ಮುಝಮ್ಮಿಲ್ ಅಹ್ಮದ್ ಸ್ವಾಗತಿಸಿದರು. ಫುವಾದ್ ಕಿರಾಅತ್ ಪಠಿಸಿದರು

Dailyhunt
Disclaimer: This content has not been generated, created or edited by Dailyhunt. Publisher: Varthabharathi