Dailyhunt Logo
  • Light mode
    Follow system
    Dark mode
    • Play Story
    • App Story
Mumbai | ನಾಲ್ಕು ಮಹಡಿಯ ವಸತಿ ಕಟ್ಟಡ ಕುಸಿತ: 6 ಮೃತ್ಯು, ಹಲವರು ಸಿಲುಕಿರುವ ಶಂಕೆ

Mumbai | ನಾಲ್ಕು ಮಹಡಿಯ ವಸತಿ ಕಟ್ಟಡ ಕುಸಿತ: 6 ಮೃತ್ಯು, ಹಲವರು ಸಿಲುಕಿರುವ ಶಂಕೆ

ಮುಂಬೈ: ನಾಲ್ಕು ಮಹಡಿಯ ವಸತಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಕನಿಷ್ಠ ನಾಲ್ಕು ಜನರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಭಿವಂಡಿಯ ಬಾಲಾಜಿ ನಗರ ಗಂಗಾರಾಮ್ವಾಡಿ ಪ್ರದೇಶದಲ್ಲಿ ನಡೆದಿದೆ .

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಹಿನೂರ್ ಅಪಾರ್ಟ್ಮೆಂಟ್ ಎಂದು ಗುರುತಿಸಲಾದ ಕಟ್ಟಡವು ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು ದಿಢೀರನೆ ಕುಸಿದು ಬಿದ್ದಿದೆ.

ಈ ಕಟ್ಟಡವನ್ನು ಮಹಾನಗರ ಪಾಲಿಕೆಯು ಮುಂಚಿತವಾಗಿಯೇ ಅಪಾಯಕಾರಿ ಎಂದು ಘೋಷಿಸಿತ್ತು ಎಂದು ತಿಳಿದುಬಂದಿದೆ.

ಕಟ್ಟಡ ಕುಸಿದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳನ್ನು ತೆರವುಗೊಳಿಸಲು ವಿಶೇಷ ರಕ್ಷಣಾ ತಂಡಗಳ ಜೊತೆಗೆ ಬೃಹತ್ ಯಂತ್ರೋಪಕರಣಗಳನ್ನು ನಿಯೋಜಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ , ಥಾಣೆ ವಿಪತ್ತು ನಿರ್ವಹಣಾ ಪಡೆ ಮತ್ತು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

"ಭಿವಂಡಿಯಲ್ಲಿ ಅಪಾಯಕಾರಿ ಎಂದು ಘೋಷಿಸಲಾದ ಇಂತಹ ಅನೇಕ ಕಟ್ಟಡಗಳಿವೆ. ನಾವು ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಇಂತಹ ಅಪಾಯಕಾರಿ ಕಟ್ಟಡಗಳಲ್ಲಿ ವಾಸಿಸುತ್ತಿರುವ ಜನರು ಕೂಡಲೇ ಅವುಗಳನ್ನು ತೆರವುಗೊಳಿಸಬೇಕೆಂದು ನಾನು ಸಲಹೆ ನೀಡುತ್ತೇನೆ" ಎಂದು ಭಿವಂಡಿ ನಿಜಾಮ್ಪುರ ನಗರ ಮಹಾನಗರ ಪಾಲಿಕೆಯ ಮೇಯರ್ ನಾರಾಯಣ್ ಚೌಧರಿ ತಿಳಿಸಿದ್ದಾರೆ.

ಕಟ್ಟಡ ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಿ ರಕ್ಷಿಸುವುದರತ್ತ ಸಂಪೂರ್ಣ ಗಮನ ಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi