Dailyhunt
ಮುರ್ಡೇಶ್ವರ ಲಯನ್ಸ್ ನಿಂದ ಬ್ಯಾರಿಕೇಡ್ ದೇಣಿಗೆ

ಮುರ್ಡೇಶ್ವರ ಲಯನ್ಸ್ ನಿಂದ ಬ್ಯಾರಿಕೇಡ್ ದೇಣಿಗೆ

ಭಟ್ಕಳ: ಮುರ್ಡೇಶ್ವರದ ಲಯನ್ಸ್ ಕ್ಲಬ್ ವತಿಯಿಂದ ಪೊಲೀಸ್ ಇಲಾಖೆಗೆ 25 ಸಾವಿರ ರೂ. ಮೌಲ್ಯದ ಮೂರು ಬ್ಯಾರಿಕೇಡ್‍ಗಳನ್ನು ದೇಣಿಗೆಯಾಗಿ ನೀಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಗೌರೀಶ್ ಆರ್. ನಾಯ್ಕರವರ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತೆಯ ಕುರಿತಾಗಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ರಸ್ತೆ ನಿಯಮದ ಪಾಲನೆಗಾಗಿ ಬ್ಯಾರಿಕೇಡ್‍ಗಳನ್ನು ಮುರ್ಡೇಶ್ವರದ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರಿಗೆ ಹಸ್ತಾಂತರಿಸಲಾಯಿತು.

ಈ ವೇಳೆ 317ಬಿ ಲಯನ್ ಜಿಲ್ಲೆಯ ಗವರ್ನರ್ ಡಾ.ಗಿರೀಶ್ ಕುಚಿನಾಡ, ಮಾತನಾಡಿ ರಸ್ತೆಯ ನಿಯಮಗಳನ್ನು ಪಾಲಿಸುವ ಮೂಲಕ ಸಂಭವನೀಯ ಅಪಘಾತಗಳನ್ನು ಹೇಗೆ ತಡೆಗಟ್ಟಬಹುದು ಎಂಬ ಕುರಿತು ಮಾಹಿತಿ ನೀಡಿದರು.

ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾದ ಗೌರೀಶ ಟಿ. ನಾಯ್ಕ, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ಪೋಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi