Dailyhunt Logo
  • Light mode
    Follow system
    Dark mode
    • Play Story
    • App Story
ನಾರ್ವೆ ಚೆಸ್: ಮ್ಯಾಗ್ನಸ್ ಕಾರ್ಲ್ ಸನ್ ರನ್ನು ಎರಡು ಬಾರಿ ಮಣಿಸಿ ಇತಿಹಾಸ ಸೃಷ್ಟಿಸಿದ ಪ್ರಜ್ಞಾನಂದ

ನಾರ್ವೆ ಚೆಸ್: ಮ್ಯಾಗ್ನಸ್ ಕಾರ್ಲ್ ಸನ್ ರನ್ನು ಎರಡು ಬಾರಿ ಮಣಿಸಿ ಇತಿಹಾಸ ಸೃಷ್ಟಿಸಿದ ಪ್ರಜ್ಞಾನಂದ

ಹೊಸದಿಲ್ಲಿ: ನಾರ್ವೆ ಚೆಸ್ 2026 ಪಂದ್ಯಾವಳಿಯಲ್ಲಿ ಮಂಗಳವಾರ ನಡೆದ ಕ್ಲಾಸಿಕಲ್ ಗೇಮ್ ನ ಎಂಟನೇ ಸುತ್ತಿನಲ್ಲಿ ವಿಶ್ವದ ನಂ. 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ ಸನ್ ರನ್ನು ಎರಡನೇ ಬಾರಿ ಮಣಿಸುವ ಮೂಲಕ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಇತಿಹಾಸ ನಿರ್ಮಿಸಿದ್ದಾರೆ.

ಈ ಫಲಿತಾಂಶದಿಂದಾಗಿ ಈ ಪ್ರತಿಷ್ಠಿತ ಚಾಂಪಿಯನ್ ಶಿಪ್ ನಲ್ಲಿ ಪ್ರಜ್ಞಾನಂದರಿಗೆ ಭಾರತದ ಮೊಟ್ಟ ಮೊದಲ ಚಾಂಪಿಯನ್ ಆಗುವ ಸಾಧ್ಯತೆ ಮತ್ತಷ್ಟು ಹೆಚ್ಚಾಗಿರುವುದಲ್ಲದೆ, ಚೆಸ್ ನಲ್ಲಿ ಮ್ಯಾಗ್ನಸ್ ಕಾರ್ಲ್ ಸನ್ ರನ್ನು ಎರಡೆರಡು ಬಾರಿ ಮಣಿಸಿದ ಭಾರತೀಯ ಆಟಗಾರ ಎಂಬ ಶ್ರೇಯ ಕೂಡಾ ಲಭಿಸಿದೆ. ಇದಲ್ಲದೆ, ಈ ವರ್ಷ ಕ್ಲಾಸಿಕಲ್ ಚೆಸ್ ಪಂದ್ಯಾವಳಿಯಲ್ಲಿ ವಿಶ್ವದ ಅಗ್ರಶ್ರೇಯಾಂಕಿತ ಆಟಗಾರ ಮ್ಯಾಗ್ನಸ್ ಕಾರ್ಲ್ ಸನ್ ರನ್ನು ಎರಡೆರಡು ಬಾರಿ ಮಣಿಸಿದ ಮೊದಲ ಆಟಗಾರ ಎಂಬ ಹಿರಿಮೆಗೂ ಅವರು ಭಾಜನರಾಗಿದ್ದಾರೆ.

20ರ ಹರೆಯದ ಪ್ರಜ್ಞಾನಂದ ನಾರ್ವೆ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ನಾರ್ವೆಯ ಆಟಗಾರ ಕಾರ್ಲ್ ಸನ್ ಗೆ ಸೋಲುಣಿಸಿದ್ದರು.

ಪ್ರಜ್ಞಾನಂದ ಅವರು 35ರ ಹರೆಯದ ಕಾರ್ಲ್ ಸನ್ ರನ್ನು ಕ್ಲಾಸಿಕಲ್ ಚೆಸ್ ನಲ್ಲಿ ಮೂರು ಬಾರಿ ಮಣಿಸಿದ ಕೆಲವೇ ಆಟಗಾರರ ಪೈಕಿ ಒಬ್ಬರಾಗಿದ್ದಾರೆ.

ಮ್ಯಾಗ್ನಸ್ ಕಾರ್ಲ್ ಸನ್ ಅವರು ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದರ ಕೈಯನ್ನು ಕುಲುಕಿ, ನಿರಾಶೆಯಿಂದ ಹೊರ ಹೋದರು. .

ಈ ಪಂದ್ಯದ ಗೆಲುವಿನೊಂದಿಗೆ 12 ಅಂಕಗಳನ್ನು ಸಂಪಾದಿಸಿರುವ 20 ವರ್ಷದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ, ಪಂದ್ಯಾವಳಿಯಲ್ಲಿ ಮೂರನೆಯ ಸ್ಥಾನಕ್ಕೆ ಏರಿದ್ದಾರೆ. ಇನ್ನು ಕೇವಲ ಎರಡು ಸುತ್ತುಗಳು ಬಾಕಿ ಉಳಿದಿದ್ದು. ಎಂಟನೇ ಬಾರಿ ನಾರ್ವೆ ಚೆಸ್ ಚಾಂಪಿಯನ್ ಆಗುವ ಮ್ಯಾಗ್ನಸ್ ಕಾರ್ಲ್ ಸನ್ ರ ಕನಸು ಬಹುತೇಕ ಭಗ್ನವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi