Dailyhunt Logo
  • Light mode
    Follow system
    Dark mode
    • Play Story
    • App Story
"ನನಗೆ ʼಹೆಡ್ಲೈನ್ʼ ಆಗುವುದು ಬೇಕಿರಲಿಲ್ಲ...": NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಮಾತನಾಡದಿರಲು ಕಾರಣ ತಿಳಿಸಿದ ರಾಘವ್ ಚಡ್ಡಾ

"ನನಗೆ ʼಹೆಡ್ಲೈನ್ʼ ಆಗುವುದು ಬೇಕಿರಲಿಲ್ಲ...": NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಮಾತನಾಡದಿರಲು ಕಾರಣ ತಿಳಿಸಿದ ರಾಘವ್ ಚಡ್ಡಾ

ಹೊಸದಿಲ್ಲಿ: ಬಿಜೆಪಿ ಸಂಸದ ರಾಘವ್ ಚಡ್ಡಾ ಅವರು ಗುರುವಾರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಕುರಿತು ಮಾತನಾಡಿದ್ದು , ಈಗ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿರುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ನನಗೆ ʼಹೆಡ್ಲೈನ್ʼ ಆಗುವುದು ಬೇಕಿರಲಿಲ್ಲ.

ಬದಲಿಗೆ ಒಂದು ʼಪರಿಣಾಮಕಾರಿ ಫಲಿತಾಂಶʼ ಬೇಕಿತ್ತು ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ(ಅಕ್ರಮ ತಡೆ) ತಿದ್ದುಪಡಿ ಮಸೂದೆ 2026 ರ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು , ʼಇದುವರೆಗೆ ಈ ವಿಷಯದ ಬಗ್ಗೆ ಏಕೆ ಮಾತನಾಡಲಿಲ್ಲʼ ಎಂಬ ಹಲವರ ಪ್ರಶ್ನೆಗಳಿಗೆ ಈಗ ಉತ್ತರಿಸುತ್ತೇನೆ ಎಂದು ಹೇಳಿದ ಬಳಿಕ ಈ ಮೇಲಿನಂತೆ ಉಲ್ಲೇಖಿಸಿದರು.

"ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ತರಲಾಗಿರುವ ಪ್ರಸ್ತಾವಿತ ವಿಧೇಯಕವು, ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಪರೀಕ್ಷೆಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಸಹಾಯ ಮಾಡುತ್ತದೆ" ಎಂದು ಪಂಜಾಬ್ ರಾಜ್ಯಸಭಾ ಸಂಸದ ಹೇಳಿದರು.

"ಕಳೆದ ಕೆಲವು ದಿನಗಳಿಂದ 'ರಾಘವ್, ನೀಟ್ ವಿಚಾರದಲ್ಲಿ ನೀವು ಯಾವಾಗ ಮಾತನಾಡುತ್ತೀರಿ? ನಾವು ನಿಮ್ಮ ಮಾತು ಕೇಳಲು ಬಯಸುತ್ತೇವೆ' ಎಂದು ಕೇಳುತ್ತಿದ್ದ ನನ್ನ ಹಿತೈಷಿಗಳಿಗೆ ನಾನು ಒಂದಿಷ್ಟು ಹೇಳಲು ಬಯಸುತ್ತೇನೆ. ನಾನು ಬಹಳ ವಿನಮ್ರವಾಗಿ ಹೇಳಲು ಬಯಸುತ್ತೇನೆ. ನಾನು ವಿರೋಧ ಪಕ್ಷದಲ್ಲಿದ್ದಾಗ ಪ್ರಶ್ನೆ ನನ್ನ ಆಯುಧವಾಗಿತ್ತು. ಆದರೆ ಇಂದು ನಾನು ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿದ್ದೇನೆ. ಇಂದು ಪರಿಹಾರ ಕಂಡುಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ" ಎಂದು ಅವರು ತಿಳಿಸಿದರು.

"ನಾನು ಪ್ರತಿದಿನ ಕ್ಯಾಮೆರಾ ಮುಂದೆ ಬಂದು ಏನನ್ನಾದರೂ ಹೇಳಬಹುದಿತ್ತು. ಆದರೆ ನನಗೆ ʼಹೆಡ್ಲೈನ್ʼ ಆಗುವುದು ಬೇಕಿರಲಿಲ್ಲ. ಬದಲಿಗೆ ಒಂದು ʼಪರಿಣಾಮಕಾರಿ ಫಲಿತಾಂಶʼ ಬೇಕಿತ್ತು" ಎಂದು ಚಡ್ಡಾ ಹೇಳಿದರು.

"ಅದಕ್ಕಾಗಿಯೇ, ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಮಾತನಾಡುತ್ತೇನೆ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ದಿನವೇ, ವ್ಯವಸ್ಥೆ ಸರಿಯಾಗುವ ದಿನವೇ ಮಾತನಾಡುತ್ತೇನೆ ಎಂದು ನನಗೆ ನಾನೇ ಭರವಸೆ ನೀಡಿದ್ದೆ. ಇಂದು ವ್ಯವಸ್ಥೆ ಸರಿಯಾಗುತ್ತಿರುವ ಆ ಐತಿಹಾಸಿಕ ದಿನವಾಗಿದೆ. ಹಾಗಾಗಿ ನಾನು ಮಾತನಾಡುತ್ತಿದ್ದೇನೆ " ಎಂದು ಅವರು ಹೇಳಿದರು.

ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ ಅವರು, "ಬಿಜೆಪಿ ನೇತೃತ್ವದ ಸರ್ಕಾರವು ಅವರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರ ಕಳಕಳಿಗೆ ಸ್ಪಂದಿಸಿದೆ" ಎಂದು ಹೇಳಿದರು.

"ನನ್ನ ಮುಂದಿನ ವಾಕ್ಯವನ್ನು ಪೂರ್ಣ ವಿಶ್ವಾಸ ಮತ್ತು ಪ್ರಾಮಾಣಿಕತೆಯಿಂದ ಹೇಳುವ ಹಕ್ಕನ್ನು ನಾನು ಪಡೆದುಕೊಂಡಿದ್ದೇನೆ. ನಮ್ಮ ವಿದ್ಯಾರ್ಥಿಗಳು ಮತ್ತು ಭಾರತದ ಯುವಕರ ವಿಷಯ ಬಂದಾಗ, ಸರ್ಕಾರ ಅವರ ಮಾತನ್ನು ಆಲಿಸಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡಿದೆ ಮತ್ತು ಸರ್ಕಾರ ಅವರ ಬೇಡಿಕೆಯನ್ನು ಈಡೇರಿಸಿದೆ" ಎಂದು ಅವರು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi