Dailyhunt Logo
  • Light mode
    Follow system
    Dark mode
    • Play Story
    • App Story
"ನಿಮಗೆ ನಾಗರಿಕತೆ ಇಲ್ಲ, ಗೌರವವೂ ಇಲ್ಲ" : ಖಾಮಿನೈ ಅಂತ್ಯಕ್ರಿಯೆ ವೇಳೆ ಇರಾನ್ ನಾಯಕರನ್ನು ನಿರ್ನಾಮ ಮಾಡಬಹುದಿತ್ತೆಂಬ ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು

"ನಿಮಗೆ ನಾಗರಿಕತೆ ಇಲ್ಲ, ಗೌರವವೂ ಇಲ್ಲ" : ಖಾಮಿನೈ ಅಂತ್ಯಕ್ರಿಯೆ ವೇಳೆ ಇರಾನ್ ನಾಯಕರನ್ನು ನಿರ್ನಾಮ ಮಾಡಬಹುದಿತ್ತೆಂಬ ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು

ಟೆಹ್ರಾನ್ : ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಯಲ್ಲಿ ನೆರೆದಿದ್ದ ಇಡೀ ಇರಾನ್ ನ ನಾಯಕತ್ವವನ್ನು ಒಂದೇ ದಾಳಿಯಲ್ಲಿ ನಿರ್ನಾಮ ಮಾಡಬಹುದಿತ್ತು ಎಂದು ಹೇಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ವಾಗ್ದಾಳಿ ನಡೆಸಿದೆ.

ಅರ್ಮೇನಿಯಾದಲ್ಲಿನ ಇರಾನ್‌ ರಾಯಭಾರಿ ಕಚೇರಿಯು ಎಕ್ಸ್ ನಲ್ಲಿ ಟ್ರಂಪ್ ಪೋಸ್ಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, "ನಿಮಗೆ ನಾಗರಿಕತೆ ಇಲ್ಲ, ಇತಿಹಾಸ ಇಲ್ಲ, ಗೌರವವೂ ಇಲ್ಲ.

ಆದ್ದರಿಂದ ಇಂತಹ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದೆ.

"ಜನರನ್ನು ಕೊಲ್ಲಬಹುದು, ಆದರೆ ಅವರ ಆದರ್ಶಗಳನ್ನು ಕೊಲ್ಲಲು ಸಾಧ್ಯವಿಲ್ಲ. ನೀವು ಖಾಮಿನೈ ಅವರನ್ನು ಹತ್ಯೆ ಮಾಡಿದ್ದೀರಿ, ಆದರೆ ವಾಸ್ತವದಲ್ಲಿ, ನೀವು ಎಲ್ಲೆಡೆ ಪರಿಮಳ ಹರಡಿದ ಸುಗಂಧ ದ್ರವ್ಯದ ಬಾಟಲಿಯನ್ನು ಒಡೆದಿದ್ದೀರಿ. ಈ ಸಂಗತಿಗಳು ನಿಮಗೆ ಅರ್ಥವಾಗುವುದಿಲ್ಲ, ಏಕೆಂದರೆ ನಿಮಗೆ ನಾಗರಿಕತೆಯೂ ಇಲ್ಲ, ಇತಿಹಾಸವೂ ಇಲ್ಲ, ಗೌರವವೂ ಇಲ್ಲ" ಎಂದು ಹೇಳಿದೆ.

Axios ಸುದ್ದಿವಾಹಿನಿಯೊಂದಿಗಿನ ಸಂವಾದದಲ್ಲಿ ಮಾತನಾಡಿದ ಟ್ರಂಪ್, ಜನರು ಅಲಿ ಖಾಮಿನೈಯನ್ನು ದ್ವೇಷಿಸುತ್ತಾರೆ ಎಂದು ಭಾವಿಸಿದ್ದೆ. ಅಂತ್ಯಕ್ರಿಯೆಯಲ್ಲಿ ಇರಾನಿನ ಕೆಲ ಜನರು ಅಳುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು, ಬಹುಶಃ ಅದು ನಕಲಿ ಕಣ್ಣೀರು ಇರಬಹುದು ಎಂದು ಹೇಳಿದ್ದರು.

ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಯಲ್ಲಿ ನೆರೆದಿದ್ದ ಇಡೀ ಇರಾನ್ ನ ನಾಯಕತ್ವವನ್ನು ಒಂದೇ ದಾಳಿಯಲ್ಲಿ ನಿರ್ನಾಮ ಮಾಡಬಹುದಿತ್ತು. ಆದರೆ, ನಾವು ಹಾಗೆ ಮಾಡುವುದಿಲ್ಲ. ಏಕೆಂದರೆ, ಹಾಗೆ ಮಾಡಿದರೆ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Varthabharathi