Dailyhunt
ನೀರಿನ ಟ್ಯಾಂಕಿಗೆ ಬಿದ್ದು ವ್ಯಕ್ತಿ ಮೃತ್ಯು

ನೀರಿನ ಟ್ಯಾಂಕಿಗೆ ಬಿದ್ದು ವ್ಯಕ್ತಿ ಮೃತ್ಯು

ಹೆಬ್ರಿ, ಎ.8: ಮನೆಯ ಮೇಲಿನ ನೀರಿನ ಟ್ಯಾಂಕಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎ.7ರಂದು ರಾತ್ರಿ ವೇಳೆ ಹೆಬ್ರಿ ಇಂದಿರಾನಗರ ಎಂಬಲ್ಲಿ ನಡೆದಿದೆ.

ಮೃತರನ್ನು ಇಂದಿರಾನಗರದ ಶೇಖರ ನಾಯ್ಕ್(57) ಎಂದು ಗುರುತಿಸ ಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು, ಮನೆಯ ಮೇಲಿನ ನೀರಿನ ಟ್ಯಾಂಕ್‌ನಲ್ಲಿ ನೀರು ಇರುವುದನ್ನು ಇಣುಕಿ ನೋಡಲು ಹೋಗಿದ್ದು, ಆಗ ಮೊಬೈಲ್ ಫೋನ್ ಟ್ಯಾಂಕ್ ಒಳಗೆ ಬಿತ್ತೆನ್ನಲಾಗಿದೆ.

ಮೊಬೈಲ್ ಫೋನ್ ಟ್ಯಾಂಕಿಯಿಂದ ಬಾಗಿ ತೆಗೆಯುವಾಗ ಟ್ಯಾಂಕಿನೊಳಗೆ ಬಿದ್ದ ಅವರು, ನೀರಿನಲ್ಲಿ ಮುಗುಚಿ ಬಿದ್ದು ಮೇಲೆ ಬರಲಾಗದೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi