ದೋಹ: ಪಾಕಿಸ್ತಾನಿ ಪ್ರಜೆಗಳಿಗೆ ತಾತ್ಕಾಲಿಕವಾಗಿ ವೀಸಾ ಆನ್ ಅರೈವಲ್ (ಪ್ರಯಾಣಿಕರು ತಮ್ಮ ಗಮ್ಯಸ್ಥಾನದ ದೇಶಕ್ಕೆ ಆಗಮಿಸಿದ ನಂತರ ವೀಸಾ ಪಡೆಯುವ ಅವಕಾಶ) ಸೌಲಭ್ಯವನ್ನು ಅಮಾನತುಗೊಳಿಸಿರುವುದಾಗಿ ಖತರ್ ನಲ್ಲಿ ಪಾಕಿಸ್ತಾನದ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ.
ʼಮಧ್ಯಪ್ರಾಚ್ಯದಲ್ಲಿ ಈಗ ಇರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಖತರ್ ಗೆ ಪ್ರಯಾಣಿಸಲು ಬಯಸುವ ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ಆನ್ ಅರೈವಲ್ ಸೌಲಭ್ಯ ಪ್ರಸ್ತುತ ಲಭ್ಯವಿರುವುದಿಲ್ಲ.
ಆದ್ದರಿಂದ ಅನನುಕೂಲತೆಯನ್ನು ತಪ್ಪಿಸಲು ಎಲ್ಲಾ ಪಾಕಿಸ್ತಾನಿ ಪ್ರಯಾಣಿಕರು ಪ್ರಯಾಣದ ಮೊದಲು ಸೂಕ್ತ ವೀಸಾಗಳನ್ನು ಪಡೆಯಲು ಸಲಹೆ ನೀಡುತ್ತಿದ್ದೇವೆ' ಎಂದು ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಈ ಮಧ್ಯೆ, ಲೆಬನಾನ್ ಪ್ರಜೆಗಳಿಗೂ ಖತರ್ ವೀಸಾ ಆನ್ ಅರೈವಲ್ ಸೌಲಭ್ಯ ತಾತ್ಕಾಲಿಕವಾಗಿ ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ.

