Dailyhunt Logo
  • Light mode
    Follow system
    Dark mode
    • Play Story
    • App Story

ಪಾಕಿಸ್ತಾನ: ಚೀನಾ ರಾಯಭಾರಿಯಿದ್ದ ಹೊಟೇಲ್ನಲ್ಲಿ ಸ್ಫೋಟ; 5 ಸಾವು

ಕ್ವೆಟ್ಟಾ (ಪಾಕಿಸ್ತಾನ), ಎ. 22: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದ ರಾಜಧಾನಿ ಕ್ವೆಟ್ಟಾ ನಗರದ ವಿಲಾಸಿ ಹೊಟೇಲೊಂದರ ಹೊರಗೆ ಬುಧವಾರ ತಡ ರಾತ್ರಿ ನಡೆದ ಬಾಂಬ್ ಸ್ಫೋಟದಲ್ಲಿ ಐವರು ಮೃತಪಟ್ಟಿದ್ದಾರೆ. ದಾಳಿ ನಡೆದಾಗ ಆ ಹೊಟೇಲ್ನಲ್ಲಿ ಚೀನಾದ ಪಾಕಿಸ್ತಾನಿ ರಾಯಭಾರಿ ತಂಗಿದ್ದರು.

ದಾಳಿಯ ಹೊಣೆಯನ್ನು ಗುರುವಾರ ಪಾಕಿಸ್ತಾನ್ ತಾಲಿಬಾನ್ ವಹಿಸಿಕೊಂಡಿದೆ.

ಚೀನಾವು ದಾಳಿಯನ್ನು ಬಲವಾಗಿ ಖಂಡಿಸಿದೆ. ಆದರೆ, ಪಾಕಿಸ್ತಾನದ ಭದ್ರತಾ ಅಧಿಕಾರಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು ಎಂದು ತಾಲಿಬಾನ್ ಹೇಳಿದೆ.

ಸೆರೀನಾ ಹೊಟೇಲ್ನಲ್ಲಿ ನಿಲ್ಲಿಸಲಾಗಿದ್ದ ಕಾರೊಂದರಲ್ಲಿ ಬಾಂಬ್ ಇರಿಸಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Varthabharathi