ತಿರುವನಂತಪುರ,ಮೇ 2: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ 'ಮೆಟ್ರೋಮ್ಯಾನ್' ಇ.ಶ್ರೀಧರನ್ ಅವರು ಕಾಂಗ್ರೆಸ್ ನಾಯಕ ಶಫಿ ಪರಂಬಿಲ್ ಅವರೆದುರು 3,859 ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ.
ಭಾರತದ ಹಲವಾರು ನಗರಗಳಲ್ಲಿ ಮೆಟ್ರೋ ರೈಲು ಮೂಲಸೌಕರ್ಯವನ್ನು ಸ್ಥಾಪಿಸಿರುವ ಹೆಗ್ಗಳಿಕೆ ಹೊಂದಿರುವ ಶ್ರೀಧರನ್ (88) 'ಮೆಟ್ರೋ ಮ್ಯಾನ್' ಎಂದೇ ಖ್ಯಾತರಾಗಿದ್ದಾರೆ. ಚುನಾವಣೆಗಳಿಗೆ ಮುನ್ನ ಬಿಜೆಪಿಯನ್ನು ಸೇರಿದ್ದ ಅವರನ್ನು ಪಕ್ಷದ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯೆಂದು ಬಣ್ಣಿಸಲಾಗಿತ್ತಾದರೂ ವಾಸ್ತವದಲ್ಲಿ ಅದು ಪಕ್ಷದ ನಿಲುವಾಗಿರಲಿಲ್ಲ.

