Dailyhunt Logo
  • Light mode
    Follow system
    Dark mode
    • Play Story
    • App Story
Pakistan | ಚೆಕ್‍ಪೋಸ್ಟ್ ಮೇಲೆ ದಾಳಿ; ಭದ್ರತಾ ಸಿಬ್ಬಂದಿ ಸಹಿತ 15 ಮಂದಿ ಮೃತ್ಯು

Pakistan | ಚೆಕ್‍ಪೋಸ್ಟ್ ಮೇಲೆ ದಾಳಿ; ಭದ್ರತಾ ಸಿಬ್ಬಂದಿ ಸಹಿತ 15 ಮಂದಿ ಮೃತ್ಯು

ಸ್ಲಾಮಾಬಾದ್, ಜು.24: ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಗಡಿ ಪ್ರಾಂತದ ಟ್ಯಾಂಕ್ ಜಿಲ್ಲೆಯಲ್ಲಿ ತಪಾಸಣಾ ಠಾಣೆಗೆ (ಚೆಕ್ ಪೋಸ್ಟ್) ಭಯೋತ್ಪಾದಕರು ಸ್ಪೋಟಕಗಳಿಂದ ತುಂಬಿದ್ದ ವಾಹನವನ್ನು ಡಿಕ್ಕಿ ಹೊಡೆಸಿದ ಪರಿಣಾಮ ಸೈನಿಕರು, ಪೊಲೀಸರು ಮತ್ತು ಸರಕಾರಿ ಸಿಬ್ಬಂದಿ ಸೇರಿದಂತೆ 15 ಜನರು ಮೃತಪಟ್ಟಿದ್ದಾರೆ ಎಂದು ಸೇನೆ ಶುಕ್ರವಾರ ತಿಳಿಸಿದೆ.

ದಾಳಿಕೋರರು ಸ್ಪೋಟಕ ತುಂಬಿದ ವಾಹನವನ್ನು ತಪಾಸಣಾ ಠಾಣೆಯ ಕಾಂಪೌಂಡ್ ಗೋಡೆಗೆ ಢಿಕ್ಕಿ ಹೊಡೆಸಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ಚೆಕ್ ಪೋಸ್ಟ್‌ನ ಮೂಲಸೌಕರ್ಯಕ್ಕೆ ತೀವ್ರ ಹಾನಿಯಾಗಿದ್ದು 12 ಮಿಲಿಟರಿ ಸಿಬ್ಬಂದಿ, ಇಬ್ಬರು ಪೊಲೀಸರು ಮತ್ತು ಅರಣ್ಯ ಇಲಾಖೆಯ ಮಾಜಿ ಸರಕಾರಿ ಅಧಿಕಾರಿ ಸೇರಿದಂತೆ 15 ಮಂದಿ ಮೃತಪಟ್ಟಿದ್ದಾರೆ.

ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲವಾದರೂ, ಈ ಪ್ರದೇಶದಲ್ಲಿ `ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್' (ಟಿಟಿಪಿ) ತೀವ್ರ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi