Dailyhunt Logo
  • Light mode
    Follow system
    Dark mode
    • Play Story
    • App Story
ಪಕ್ಷಾಂತರಕ್ಕೆ ಡಿಎಂಕೆಯಿಂದ 100 ಕೋಟಿ ರೂ.ವರೆಗೆ ಆಮಿಷ : TVK ಶಾಸಕ ಸರವಣನ್ ಆರೋಪ

ಪಕ್ಷಾಂತರಕ್ಕೆ ಡಿಎಂಕೆಯಿಂದ 100 ಕೋಟಿ ರೂ.ವರೆಗೆ ಆಮಿಷ : TVK ಶಾಸಕ ಸರವಣನ್ ಆರೋಪ

ಚೆನ್ನೈ, ಜು. 7: ಡಿಎಂಕೆ ಸೇರಲು ತನಗೆ 30ರಿಂದ 100 ಕೋ.ರೂ. ವರೆಗೆ ಆಮಿಷ ಒಡ್ಡಲಾಗಿತ್ತು. ಅಲ್ಲದೆ, ಇದಕ್ಕೆ ಒಪ್ಪದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಶ್ರೀವೈಕುಂಠಂ ಕ್ಷೇತ್ರದ ಟಿವಿಕೆ ಶಾಸಕ ಜಿ. ಸರವಣನ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸರವಣನ್, ಈ ಶಾಸಕರ ಖರೀದಿ ಪ್ರಯತ್ನಗಳಿಗೆ ಸಂಬಂಧಿಸಿದಂತೆ ತಮ್ಮಲ್ಲಿ ಬಲವಾದ ಸಾಕ್ಷ್ಯಾಧಾರಗಳಿವೆ ಎಂದು ಪ್ರತಿಪಾದಿಸಿದರು.

''ಹಲವು ವ್ಯಕ್ತಿಗಳು ನೇರವಾಗಿ ನನ್ನನ್ನು ಸಂಪರ್ಕಿಸಿ ಭಾರೀ ಹಣದ ಆಮಿಷ ಒಡ್ಡಿದ್ದಾರೆ. ನಿಮಗೆ 30 ಕೋ.ರೂ., 50 ಕೋ.ರೂ. ಅಥವಾ 100 ಕೋ. ರೂ. ನೀಡುತ್ತೇವೆ. ಡಿಎಂಕೆ ಸೇರಿ'' ಎಂದು ಅವರು ಹೇಳಿದ್ದಾರೆ. ''ನಾನು ಅದನ್ನು ನಿರಾಕರಿಸಿದಾಗ, ಅವರು ಕಿರುಕುಳ ನೀಡಲು ಆರಂಭಿಸಿದರು. ಅಷ್ಟೇ ಅಲ್ಲದೆ, ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದರು'' ಎಂದು ಅವರು ಪ್ರತಿಪಾದಿಸಿದ್ದಾರೆ.

''ನಾನು ತಳಮಟ್ಟದಿಂದ ಬಂದು ಶಾಸಕನಾಗಿರುವುದರಿಂದ ಅವರು ನನ್ನನ್ನು ಸುಲಭವಾಗಿ ಹೆದರಿಸಬಹುದು ಅಥವಾ ಹಣ ನೀಡಿ ಖರೀದಿಸಬಹುದು ಎಂದು ಅವರು ಭಾವಿಸಿದ್ದರು'' ಎಂದು ಸರವಣನ್ ಹೇಳಿದರು.

ತಾನು ಆಧಾರ ರಹಿತವಾಗಿ ಈ ಆರೋಪಗಳನ್ನು ಮಾಡುತ್ತಿಲ್ಲ. ತನ್ನ ವಾದವನ್ನು ಬೆಂಬಲಿಸಲು ಬಲವಾದ ಪುರಾವೆಗಳು ಇವೆ ಎಂದು ಅವರು ತಿಳಿಸಿದರು.

''ಲಂಚದ ಆಮಿಷ ಒಡ್ಡಿರುವ ಬಗ್ಗೆ ನನ್ನ ಬಳಿ ಸ್ಪಷ್ಟ ಪುರಾವೆಗಳು ಇವೆ. ತಿರುನಲ್ವೇಲಿಯ ಚಿತ್ರಮಂದಿರದ ಮಾಲಕರೊಬ್ಬರು ಇದರಲ್ಲಿ ಭಾಗಿಯಾಗಿದ್ದಾರೆ. ಮಾಜಿ ಸಚಿವರೊಬ್ಬರ ನಾಲ್ವರು ಬೆಂಬಲಿಗರು ಕೂಡ ಈ ಒಪ್ಪಂದದ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ'' ಎಂದು ಸರವಣನ್ ಆರೋಪಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi