Wednesday, 16 Sep, 9.34 pm ವಾರ್ತಾಭಾರತಿ

ಮುಖಪುಟ
ರಾಜ್ಯದಲ್ಲಿ ಮತ್ತೆ 9,725 ಮಂದಿಗೆ ಕೋವಿಡ್ ಪಾಸಿಟಿವ್; ಸೋಂಕಿಗೆ 70 ಮಂದಿ ಬಲಿ

ಬೆಂಗಳೂರು, ಸೆ.16: ರಾಜ್ಯದಲ್ಲಿ ಬುಧವಾರ 9,725 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 70 ಜನರು ಸೋಂಕಿಗೆ ಬಲಿಯಾಗಿದ್ದು, 6,583 ಜನರು ಗುಣಮುಖರಾಗಿದ್ದಾರೆ.

ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 4,84,990ಕ್ಕೆ ತಲುಪಿದ್ದು, 818 ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 7,536ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 1,01,626ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

70 ಸೋಂಕಿತರು ಬಲಿ: ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 27, ಬೀದರ್ 1, ಚಿಕ್ಕಬಳ್ಳಾಪುರ 2, ಕೋಲಾರ 1, ಮೈಸೂರು 17, ರಾಮನಗರ 5, ತುಮಕೂರು 5, ಉತ್ತರ ಕನ್ನಡ 4, ವಿಜಯಪುರ 2, ಯಾದಗಿರಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 9,725 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 158, ಬಳ್ಳಾರಿ 381, ಬೆಳಗಾವಿ 258, ಬೆಂಗಳೂರು ಗ್ರಾಮಾಂತರ 168, ಬೆಂಗಳೂರು ನಗರ 3,571, ಬೀದರ್ 52, ಚಾಮರಾಜನಗರ 65, ಚಿಕ್ಕಬಳ್ಳಾಪುರ 149, ಚಿಕ್ಕಮಗಳೂರು 171, ಚಿತ್ರದುರ್ಗ 227, ದಕ್ಷಿಣ ಕನ್ನಡ 466, ದಾವಣಗೆರೆ 213, ಧಾರವಾಡ 246, ಗದಗ 108, ಹಾಸನ 308, ಹಾವೇರಿ 81, ಕಲಬುರ್ಗಿ 221, ಕೊಡಗು 41, ಕೋಲಾರ 101, ಕೊಪ್ಪಳ 152, ಮಂಡ್ಯ 182, ಮೈಸೂರು 748, ರಾಯಚೂರು 193, ರಾಮನಗರ 62, ಶಿವಮೊಗ್ಗ 293, ತುಮಕೂರು 401, ಉಡುಪಿ 191, ಉತ್ತರ ಕನ್ನಡ 294, ವಿಜಯಪುರ 115, ಯಾದಗಿರಿ ಜಿಲ್ಲೆಯಲ್ಲಿ 109 ಪ್ರಕರಣಗಳು ಪತ್ತೆಯಾಗಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top