Dailyhunt

ರಶ್ಯಾದ ಬಾಹ್ಯಾಕಾಶ ನಿಲ್ದಾಣದಲ್ಲಿ ಬೆಂಕಿ ಅಪಾಯದ ಎಚ್ಚರಿಕೆ ಸಂದೇಶ

ಮಾಸ್ಕೋ, ಸೆ.9: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ರಶ್ಯಾ ವಿಭಾಗದಲ್ಲಿ ಗುರುವಾರ ಬೆಳಿಗ್ಗೆ ಹಠಾತ್ತನೆ ಬೆಂಕಿ ಮತ್ತು ಹೊಗೆ ಅಪಾಯದ ಮುನ್ನೆಚ್ಚರಿಕೆ ನೀಡುವ ಸಂದೇಶ ಮೊಳಗಿದೆ ಎಂದು ರಶ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಮೊಸ್ ಹೇಳಿದೆ.

ಬಾಹ್ಯಾಕಾಶ ನಿಲ್ದಾಣದ ಬ್ಯಾಟರಿಗಳನ್ನು ಮರುಪೂರಣ(ರಿಚಾರ್ಜ್) ಮಾಡುವ ಸಂದರ್ಭ ಈ ಎಚ್ಚರಿಕೆ ಸಂದೇಶ ಮೊಳಗಿದೆ.

ತಕ್ಷಣ ನಿಲ್ದಾಣದ ಸಿಬ್ಬಂದಿ ಗಾಳಿಶೋಧಕ(ಏರ್‌ಫಿಲ್ಟರ್) ವ್ಯವಸ್ಥೆಯನ್ನು ಸಕ್ರಿಯಗೊಳಿಸಿ ಗಾಳಿಯ ಗುಣಮಟ್ಟವನ್ನು ಸಹಜ ಸ್ಥಿತಿಗೆ ತಂದರು. ಗುರುವಾರ ನಿಗದಿಯಾಗಿರುವ ಬಾಹ್ಯಾಕಾಶದ ನಡಿಗೆ ಯಥಾಪ್ರಕಾರ ನಡೆಯಲಿದೆ ಎಂದು ರಾಸ್ಕೊಮೋಸ್ ಹೇಳಿದೆ.

ಬಾಹ್ಯಾಕಾಶ ನಿಲ್ದಾಣದಲ್ಲಿ ಈಗ ಅಮೆರಿಕದ ಗಗನಯಾತ್ರಿಗಳಾದ ಮಾರ್ಕ್ ಹೇ, ಶೇನ್ ಕಿಂಬರ್ಗ್ ಮತ್ತು ಮೆಗಾನ್ ಮೆಕಾರ್ಥರ್, ರಶ್ಯಾದ ಒಲೆಗ್ ನೊವಿಸ್ಕಿ ಮತ್ತು ಪ್ರೋತ್ರ್ ದುಬ್ರೋವ್, ಜಪಾನ್‌ನ ಅಕಿಹಿಕೊ ಹೊಶಿಡೆ ಮತ್ತು ಯುರೋಪ್‌ನ ಥಾಮಸ್ ಪೆಸ್ಕ್ವೆಟ್ ಇದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi