ಉಡುಪಿ, ಎ.8: ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣದ ಸಮೀಪ ಅಭ್ಯುದಯ ಕೋ ಆಪರೇಟಿವ್ ಬ್ಯಾಂಕಿನ ಎದುರು, ಹಾದುಹೋಗುವ ರಸ್ತೆಯ ಅಂಚಿನಲ್ಲಿರುವ ಪಾದಚಾರಿ ರಸ್ತೆಗೆ ಅಳವಡಿಸಿರುವ ಚಪ್ಪಡಿಕಲ್ಲು, ಕುಸಿದು ಕಾಲುವೆಗೆ ಬಿದ್ದಿದ್ದು, ಮೃತ್ಯು ಕೂಪ ಸೃಷ್ಟಿಗೊಂಡಿದೆ.
ಪಾದಚಾರಿಗಳು ಕಂದಕದಲ್ಲಿ ಎಡವಿಬಿದ್ದು, ಗಾಯಾಳಾಗಿರುವ ಘಟನೆಗಳು ಸಂಭವಿಸಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ.
ಕಂದಕ ಇರವ ರಸ್ತೆ ಕಿರಿದಾಗಿರುವುದು, ಮೂರು ರಸ್ತೆಗಳು ಈ ಸ್ಥಳದಲ್ಲಿ ಸಂಗಮಿಸಲ್ಪ ಡುತ್ತವೆ. ಇದು ವಸತಿ ಪ್ರದೇಶ ಆಗಿರುವುದರಿಂದ ವಾಹನ ಸಂಚಾರವು ಹೆಚ್ಚಾಗಿದೆ. ವಾಹನಗಳು ಆಯಾತಪ್ಪಿ ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ನಗರಾಡಳಿತ ತಕ್ಷಣವಾಗಿ ಸಮಸ್ಯೆಯನ್ನು ಪರಿಶೀಲಿಸಿ ಪರಿಹರಿಸುವಂತೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

