Dailyhunt Logo
  • Light mode
    Follow system
    Dark mode
    • Play Story
    • App Story
"ಸಾವರ್ಕರ್ ಮುಸ್ಲಿಮರನ್ನು ದ್ವೇಷಿಸಿಲ್ಲ, ಅವರನ್ನು ಮುಸ್ಲಿಂ ದ್ವೇಷಿ ಎಂದು ಬಿಂಬಿಸಿ ರಾಹುಲ್ ಗಾಂಧಿ ಮಾನಹಾನಿ ಮಾಡಿದ್ದಾರೆ": ಮೊಮ್ಮಗ ಸತ್ಯಕಿ ಸಾವರ್ಕರ್

"ಸಾವರ್ಕರ್ ಮುಸ್ಲಿಮರನ್ನು ದ್ವೇಷಿಸಿಲ್ಲ, ಅವರನ್ನು ಮುಸ್ಲಿಂ ದ್ವೇಷಿ ಎಂದು ಬಿಂಬಿಸಿ ರಾಹುಲ್ ಗಾಂಧಿ ಮಾನಹಾನಿ ಮಾಡಿದ್ದಾರೆ": ಮೊಮ್ಮಗ ಸತ್ಯಕಿ ಸಾವರ್ಕರ್

ಹೊಸದಿಲ್ಲಿ : ಸಾವರ್ಕರ್ ಎಂದೂ ಮುಸ್ಲಿಮರನ್ನು ದ್ವೇಷಿಸಿಲ್ಲ. ಆದರೆ, ಅವರನ್ನು ಮುಸ್ಲಿಂ ದ್ವೇಷಿ ಎಂದು ಬಿಂಬಿಸುವ ಮೂಲಕ ರಾಹುಲ್ ಗಾಂಧಿ ಮಾನಹಾನಿ ಮಾಡಿದ್ದಾರೆ ಎಂದು ವಿನಾಯಕ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು livelaw ವರದಿ ಮಾಡಿದೆ.

ಲಂಡನ್‌ನಲ್ಲಿ ಆಕ್ಷೇಪಾರ್ಹ ಭಾಷಣ ಮಾಡುವ ಮೂಲಕ ಸಾವರ್ಕರ್ ಅವರ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಸತ್ಯಕಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಧೀಶ ಅಮೋಲ್ ಶಿಂಧೆ ಅವರ ಪೀಠದ ಮುಂದೆ ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ಅವರು ಸತ್ಯಕಿ ಅವರಿಗೆ ಪ್ರತಿ ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಭಾಷಣದಲ್ಲಿ ಮುಸ್ಲಿಮರನ್ನು 'ತೀವ್ರವಾಗಿ ದ್ವೇಷಿಸುವ ವ್ಯಕ್ತಿ' ಎಂದು ಬಿಂಬಿಸುವ ಮೂಲಕ ನನ್ನ ಮುತ್ತಜ್ಜ ಸಾವರ್ಕರ್ ಅವರ ಮಾನಹಾನಿ ಮಾಡಿದ್ದಾರೆ. ವಾಸ್ತವವಾಗಿ, ಸಾವರ್ಕರ್ ಅವರು ಎಂದಿಗೂ ಮುಸ್ಲಿಮರನ್ನು ದ್ವೇಷಿಸಿರಲಿಲ್ಲ ಎಂದು ಸತ್ಯಕಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸತ್ಯಕಿ ಅವರನ್ನು ರಾಹುಲ್ ಗಾಂಧಿ ಅವರ ಭಾಷಣದಲ್ಲಿ ನೀವು ಮಾನಹಾನಿಕರ ಎಂದು ಪರಿಗಣಿಸುವ ಅಂಶ ಯಾವುದು ಎಂದು ಪ್ರಶ್ನಿಸಿದಾಗ, ಸಾವರ್ಕರ್ ಅವರದ್ದು ಎನ್ನಲಾದ ಪುಸ್ತಕದಿಂದ ಗಾಂಧಿಯವರು ಓದಿದ್ದಾರೆ ಎಂಬ ವಾಕ್ಯವನ್ನು ಉಲ್ಲೇಖಿಸಿದರು, ಅದರಲ್ಲಿ ಸಾವರ್ಕರ್ ಮತ್ತು ಅವರ ಕೆಲವು ಸ್ನೇಹಿತರು ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ವಿವರಿಸುತ್ತದೆ, ಅದರ ನಂತರ ಸಾವರ್ಕರ್ ಘಟನೆ ಬಗ್ಗೆ ತೃಪ್ತಿ ಭಾವವನ್ನು ಅನುಭವಿಸಿದರು ಎಂದು ಅದರಲ್ಲಿ ಹೇಳಲಾಗಿದೆ.

ಮುಂದುವರಿದ ಪ್ರತಿಪ್ರಶ್ನೆ ವೇಳೆ ಸತ್ಯಕಿ ಅವರು, 2025ರ ಡಿಸೆಂಬರ್ 12ರಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಡಮಾನ್‌ನಲ್ಲಿ ಸಾವರ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು ಎಂದು ಒಪ್ಪಿಕೊಂಡರು. ಆದರೆ, RSS ಸಾವರ್ಕರ್ ಅವರ ಸಿದ್ಧಾಂತವನ್ನು ಅನುಸರಿಸುತ್ತದೆಯೇ ಎಂಬುದು ತಮಗೆ ತಿಳಿದಿಲ್ಲ ಎಂದು ಅವರು ಹೇಳಿದರು.

2024ರ ಜುಲೈ 3ರಂದು ಸಾವರ್ಕರ್ ಅವರನ್ನು ಮಾನಹಾನಿ ಮಾಡಿದ ಬಗ್ಗೆ ರಾಹುಲ್‌ ಗಾಂಧಿ ವಿರುದ್ಧ ನಡೆಯುತ್ತಿರುವ ಪ್ರಕರಣವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಮಾತನಾಡಿದ್ದಾರೆ ಎಂದು ಸತ್ಯಕಿ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi