Wednesday, 21 Oct, 7.51 pm ವಾರ್ತಾಭಾರತಿ

ಕರಾವಳಿ
ಸಮಸ್ತ ಇಸ್ಲಾಮಿಕ್ ಸೆ೦ಟರ್ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಮಂಗಳೂರು : ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಇದರ ಅಂಗ ಸಂಸ್ಥೆ ಸಮಸ್ತ ಇಸ್ಲಾಮಿಕ್ ಸೆ೦ಟರ್ ದಮಾಮ್ ಮತ್ತು ಖೋಬರ್ ಪ್ರಾಂತ್ಯದ ವಾರ್ಷಿಕ ಮಹಾಸಭೆ ಹಾಗೂ ಮಾಸಿಕ ಮಜ್ಲಿಸ್ಸುನ್ನೂರ್ ಕಾರ್ಯಕ್ರಮವು ದಮಾಮ್ ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬಶೀರ್ ಅಝ್ಹರಿ ಚಾರ್ಮಾಡಿ ವಹಿಸಿದ್ದರು. ದಾವೂದ್ ಕೃಷ್ಣಾಪುರ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಹೈದರ್ ಅಡ್ಡೂರು ನೆರವೇರಿಸಿದರು.

ರಝಾಕ್ ಫರ೦ಗಿಪೇಟೆ ನೂತನ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಕೊಟ್ಟರು. ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ದಮಾಮ್ ಮತ್ತು ಖೋಬರ್ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಆಬಿದ್ ತಂಙಳ್ ಮೊಗ್ರಾಲ್, ಅಧ್ಯಕ್ಷರಾಗಿ ಬಶೀರ್ ಅಝ್ಹರಿ ಚಾರ್ಮಾಡಿ, ಉಪಾಧ್ಯಕ್ಷರಾಗಿ ಹೈದರ್ ಅಡ್ಡೂರು, ಶರೀಫ಼್ ಅಡ್ಡೂರು, ಪ್ರಧಾನ ಕಾರ್ಯದರ್ಶಿಯಾಗಿ ಶ೦ಶುದ್ದೀನ್ ಅಡ್ಡೂರು, ಕಾರ್ಯದರ್ಶಿಗಳಾಗಿ ಅಬ್ದುಲ್ ಮಜೀದ್ ಮ೦ಜನಾಡಿ, ಇಮ್ರಾನ್ ದೇರಳಕಟ್ಟೆ, ಕೋಶಾಧಿಕಾರಿಯಾಗಿ ದಾವೂದ್ ಕೃಷ್ಣಾಪುರ, ಲೆಕ್ಕಪರಿಶೋಧಕರಾಗಿ ರಿಯಾಝ್ ಅಡ್ಡೂರು, ಸಲಹೆಗಾರರಾಗಿ ಅಬ್ದುಲ್ ರಹ್ಮಾನ್ ದಾರಿಮಿ ನೆಲ್ಯಾಡಿ ಹಾಗೂ ಇತರ ಮೂವರನ್ನು ಸಮಿತಿ ಸದಸ್ಯರಾಗಿ ಆರಿಸಲಾಯಿತು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top