ಇಸ್ಲಾಮಾಬಾದ್, ಸೆ.9: ಮಹಿಳಾ ಶಿಕ್ಷಕರು ಜೀನ್ಸ್ ಮತ್ತು ಬಿಗಿಯುಡುಗೆ ಧರಿಸಬಾರದು ಎಂದು ಪಾಕಿಸ್ತಾನದ ಫೆಡರಲ್ ಡೈರೆಕ್ಟರೇಟ್ ಆಫ್ ಎಜುಕೇಷನ್(ಎಫ್‌ಡಿಇ) ಸೂಚಿಸಿದೆ.
ಬೋಧನಾ ವರ್ಗದವರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿರುವ ಎಫ್‌ಡಿಇ, ಪುರುಷ ಶಿಕ್ಷಕರೂ ಜೀನ್ಸ್ ಮತ್ತು ಟಿ-ಶರ್ಟ್ಸ್ ಧರಿಸಬಾರದು ಎಂದು ಸೂಚಿಸಿದೆ.
ಸಮರ್ಪಕ ಜಾರಿ ಮತ್ತು ಪಾಲನೆಯನ್ನು ಖಾತರಿಪಡಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
