Dailyhunt Logo
  • Light mode
    Follow system
    Dark mode
    • Play Story
    • App Story
ಸೋನಿಯಾ ಗಾಂಧಿ ಅವರ ಆತ್ಮಕಥನ ಪ್ರಕಟಿಸದಿರಲು ಪೆಂಗ್ವಿನ್ ಇಂಡಿಯಾ ನಿರ್ಧಾರ: ವರದಿ

ಸೋನಿಯಾ ಗಾಂಧಿ ಅವರ ಆತ್ಮಕಥನ ಪ್ರಕಟಿಸದಿರಲು ಪೆಂಗ್ವಿನ್ ಇಂಡಿಯಾ ನಿರ್ಧಾರ: ವರದಿ

ಹೊಸದಿಲ್ಲಿ: ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (PRHI) ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥನ 'Belonging: A Journey of Love in India' ಕೃತಿಯನ್ನು ಪ್ರಕಟಿಸದಿರಲು ನಿರ್ಧರಿಸಿದೆ ಎಂದು newindianexpress.com ವರದಿ ಮಾಡಿದೆ.

ಪ್ರಕಾಶಕರು ಕೋರಿದ "ಸಂಪಾದಕೀಯ ಬದಲಾವಣೆಗಳು ಮತ್ತು ಕೆಲವು ವಿಷಯಗಳ ಅಳಿಸುವಿಕೆ" ಕುರಿತು ಉಂಟಾದ ಭಿನ್ನಾಭಿಪ್ರಾಯ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಸೋನಿಯಾ ಗಾಂಧಿ ಅವರು ಈ ಬದಲಾವಣೆಗಳಿಗೆ ಒಪ್ಪದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು The Indian Express ವರದಿ ಮಾಡಿದೆ.

ಈ ಆತ್ಮಕಥನವು ಪೆಂಗ್ವಿನ್ ರಾಂಡಮ್ ಹೌಸ್ ನ ಅಂಗಸಂಸ್ಥೆಯಾದ ಆಲ್ಫ್ರೆಡ್ ಎ.ನಾಫ್ ಮೂಲಕ ನವೆಂಬರ್ 10ರಂದು ಅಂತಾರಾಷ್ಟ್ರೀಯವಾಗಿ ಬಿಡುಗಡೆಯಾಗಬೇಕಿತ್ತು. ನಾಫ್ ಈ ಹಿಂದೆ ಪುಸ್ತಕದ ಮೊದಲ ಮುದ್ರಣವಾಗಿ 1 ಲಕ್ಷ ಪ್ರತಿಗಳನ್ನು ಮುದ್ರಿಸುವುದಾಗಿ ಘೋಷಿಸಿತ್ತು.

PRHI ಹಿಂದೆ ಸರಿದ ಬಳಿಕ ಹಾರ್ಪರ್ಕಾಲಿನ್ಸ್ ಇಂಡಿಯಾ ಈ ಆತ್ಮಕಥನವನ್ನು ಭಾರತದಲ್ಲಿ ಪ್ರಕಟಿಸಿ ವಿತರಿಸುವ ಒಪ್ಪಂದವನ್ನು ಅಂತಿಮಗೊಳಿಸುವ ಹಂತದಲ್ಲಿದೆ ಎಂದು ವರದಿಯಾಗಿದೆ.

ಈ ಬೆಳವಣಿಗೆಯಿಂದ ಪುಸ್ತಕದ ಅಂತಾರಾಷ್ಟ್ರೀಯ ಪ್ರಕಟಣೆಗೆ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಆತ್ಮಕಥನವು 2026ರ ನವೆಂಬರ್ 10ರಂದು ಜಾಗತಿಕವಾಗಿ ಬಿಡುಗಡೆಯಾಗಲಿದ್ದು, ಅಮೆರಿಕದಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಅಂಗಸಂಸ್ಥೆಯಾದ ಆಲ್ಫ್ರೆಡ್ ಎ. ನಾಫ್ ಮೂಲಕ ಪ್ರಕಟವಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi