Dailyhunt Logo
  • Light mode
    Follow system
    Dark mode
    • Play Story
    • App Story
ತಮ್ಮ ಮುಖದ ಚಿತ್ರ ಸೇರಿಸಿದ ಇರಾನ್ ನಕ್ಷೆ ಹಂಚಿಕೊಂಡ ಟ್ರಂಪ್

ತಮ್ಮ ಮುಖದ ಚಿತ್ರ ಸೇರಿಸಿದ ಇರಾನ್ ನಕ್ಷೆ ಹಂಚಿಕೊಂಡ ಟ್ರಂಪ್

ವಾಷಿಂಗ್ಟನ್, ಸೆ. 7: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರವಿವಾರ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಗಳನ್ನು ಮಾಡುವ ಮೂಲಕ ಇರಾನ್ ವಿರುದ್ಧದ ತಮ್ಮ ಒತ್ತಡದ ತಂತ್ರವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಟ್ರಂಪ್ ಅವರು ಇರಾನ್ ಗೆ ಸಂಬಂಧಿಸಿದ ಏಳು ಪೋಸ್ಟ್ಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಆರ್ಥಿಕ ದತ್ತಾಂಶ, ಭೂಪಟಗಳು ಮತ್ತು ಎಐ ಆಧಾರಿತ ಗಮನ ಸೆಳೆಯುವ ಚಿತ್ರಗಳನ್ನು ನೀಡಿದ್ದಾರೆ.

ಈ ಪೈಕಿ ಒಂದು ಪೋಸ್ಟ್ ನಲ್ಲಿ ಇರಾನ್ ಭೂಪಟದ ಮೇಲೆ ಟ್ರಂಪ್ ಅವರ ಮುಖವನ್ನು ಜೋಡಿಸಲಾಗಿದೆ.

ಟ್ರಂಪ್ ಹಂಚಿಕೊಂಡ ಗ್ರಾಫಿಕ್ಸ್ಗಳಲ್ಲಿ ಒಂದು ಹಾರ್ಮುಝ್ ಜಲಸಂಧಿಯ ಮೇಲೆ ಗಮನ ಕೇಂದ್ರೀಕರಿಸಿದ್ದು, ಅದರಲ್ಲಿ 'ಹಾರ್ಮುಝ್ ತೈಲ ಪ್ರಮಾಣ ಮರಳಿ ಬಂದಿದೆ' ಎಂಬ ಶೀರ್ಷಿಕೆ ಇತ್ತು. ಇರಾನ್ ಮತ್ತು ಒಮನ್ ನಡುವಿನ ಈ ಕಿರಿದಾದ ಸಮುದ್ರ ಮಾರ್ಗವನ್ನು ತೋರಿಸುವ ಈ ಗ್ರಾಫಿಕ್ಸ್ನಲ್ಲಿ, ಸಂಘರ್ಷಕ್ಕೂ ಮೊದಲು ದಿನಕ್ಕೆ 20 ದಶಲಕ್ಷ ಬ್ಯಾರಲ್ಗಳಷ್ಟಿದ್ದ ತೈಲ ಹರಿವು ಈಗ ದಿನಕ್ಕೆ 18 ದಶಲಕ್ಷ ಬ್ಯಾರಲ್ಗಳಿಗೆ ಚೇತರಿಸಿಕೊಂಡಿದೆ ಎಂದು ಟ್ರಂಪ್ ಹಂಚಿಕೊಂಡ ಗ್ರಾಫಿಕ್ಸ್ನಲ್ಲಿ ಹೇಳಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi