Dailyhunt Logo
  • Light mode
    Follow system
    Dark mode
    • Play Story
    • App Story
ಟೆಸ್ಟ್ ಕ್ರಿಕೆಟ್‌ಗೆ ಆಸಿಸ್ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ವಿದಾಯ

ಟೆಸ್ಟ್ ಕ್ರಿಕೆಟ್‌ಗೆ ಆಸಿಸ್ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ವಿದಾಯ

photo;twitter/@7Cricket

ಸಿಡ್ನಿ (ಆಸ್ಟ್ರೇಲಿಯ), ಅ. 20; ಆಸ್ಟ್ರೇಲಿಯದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು 'ದ ಆಸ್ಟ್ರೇಲಿಯನ್' ಪತ್ರಿಕೆ ಬುಧವಾರ ವರದಿ ಮಾಡಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಆಯಶಸ್ ಸರಣಿಗೆ ಮುನ್ನ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ತನ್ನ ಕ್ರೀಡಾ ಜೀವನದುದ್ದಕ್ಕೂ ಗಾಯಗಳೊಂದಿಗೆ ಹೋರಾಡಿದ 31 ವರ್ಷದ ಪ್ಯಾಟಿನ್ಸನ್ ಆಸ್ಟ್ರೇಲಿಯ ಪರ 21 ಟೆಸ್ಟ್ ಗಳಲ್ಲಿ ಆಡಿ 81 ವಿಕೆಟ್‌ಗಳನ್ನು ಗಳಿಸಿದ್ದಾರೆ. ಅವರು 2011ರ ಡಿಸೆಂಬರ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಅವರ ನಿರ್ಧಾರದಿಂದಾಗಿ 5 ಪಂದ್ಯಗಳ ಆಯಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯವು ಬೌಲರ್‌ಗಳ ಕೊರತೆಯನ್ನು ಎದುರಿಸುವ ಸಾಧ್ಯತೆ ಇದೆ. ಆಯಶಸ್ ಸರಣಿಯು ಡಿಸೆಂಬರ್ 8ರಂದು ಬ್ರಿಸ್ಬೇನ್‌ನಲ್ಲಿ ಆರಂಭಗೊಳ್ಳಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi