Dailyhunt
ತೃತೀಯ ಭಾಷೆಗೆ ಗ್ರೇಡ್ ವ್ಯವಸ್ಥೆ: ತೀರ್ಮಾನ ಪರಿಶೀಲಿಸಲು ಕಾರ್ಯದರ್ಶಿಗೆ ಪತ್ರ ಬರೆದ ರಾಜ್ಯಪಾಲರು

ತೃತೀಯ ಭಾಷೆಗೆ ಗ್ರೇಡ್ ವ್ಯವಸ್ಥೆ: ತೀರ್ಮಾನ ಪರಿಶೀಲಿಸಲು ಕಾರ್ಯದರ್ಶಿಗೆ ಪತ್ರ ಬರೆದ ರಾಜ್ಯಪಾಲರು

ಬೆಂಗಳೂರು : ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕ ವ್ಯವಸ್ಥೆ ಕೈಬಿಟ್ಟು ಗ್ರೇಡ್ ವ್ಯವಸ್ಥೆಯನ್ನು ಜಾರಿ ಮಾಡುವ ತೀರ್ಮಾನವನ್ನು ಮರು ಪರಿಶೀಲಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‍ಗೆ ಪತ್ರ ಬರೆದಿದ್ದಾರೆ.

ಅಂಕಗಳ ಬದಲಿಗೆ ಕೇವಲ ಗ್ರೇಡ್‍ಗಳನ್ನು ನೀಡುವ ವ್ಯವಸ್ಥೆಯಿಂದಾಗಿ ತೃತೀಯ ಭಾಷಾ ವಿಷಯದ ಶೈಕ್ಷಣಿಕ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ತೃತೀಯ ಭಾಷೆಯನ್ನು ಗಂಭೀರವಾಗಿ ಕಲಿಯುವ ಆಸಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶಿಕ್ಷಣ ಕ್ಷೇತ್ರದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಬೇಕು. ಆದುದರಿಂದ ಶಾಲಾ ಶಿಕ್ಷಣ ಇಲಾಖೆ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಈ ವಿಷಯವನ್ನು ಪರಿಶೀಲಿಸುವುದು ಸೂಕ್ತವಾಗಿದೆ. ಇನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ರಾಜ್ಯದ ಶೈಕ್ಷಣಿಕ ಉದ್ದೇಶಗಳ ಹಿತದೃಷ್ಟಿಯಿಂದ ತೃತೀಯ ಭಾಷೆಗೆ ಅಂಕ ವ್ಯವಸ್ಥೆಯನ್ನು ಜಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi