ಭೋಪಾಲ್: ರೂಪದರ್ಶಿ, ನಟಿ ತ್ವಿಶಾ ಶರ್ಮ ವರದಕ್ಷಿಣೆ ಕಿರುಕುಳ, ಸಾವು ಪ್ರಕರಣಕ್ಕೆ ಸಂಬಂಧಿಸಿ ಅವರ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರಿಗೆ ಮಂಜೂರು ಮಾಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಬುಧವಾರ ಮಧ್ಯಪ್ರದೇಶ ಹೈಕೋರ್ಟ್ ರದ್ದುಪಡಿಸಿದೆ.
ಮಧ್ಯರಾತ್ರಿಯ ವೇಳೆಗೆ ಗಿರಿಬಾಲಾ ಸಿಂಗ್ ಅವರಿಗೆ ಮಂಜೂರಾಗಿದ್ದ ನಿರೀಕ್ಷಣಾ ಜಾಮೀನನ್ನು ಬುಧವಾರ ಬೆಳಗ್ಗೆ ನಡೆದ ವಿಚಾರಣೆಯ ವೇಳೆ ನ್ಯಾ.
ದೇವ್ ನಾರಾಯಣ್ ಮಿಶ್ರಾರ ವಜಾಗೊಳಿಸಿದ್ದಾರೆ.
ಮೃತ ತ್ವಿಶಾ ಶರ್ಮ ಕುಟುಂಬದ ಸದಸ್ಯರು ಕೇವಲ ಆಕೆಯ ಪತಿ ಸಮರ್ಥ್ ಸಿಂಗ್ ಮೇಲೆ ಮಾತ್ರ ಆರೋಪಗಳನ್ನು ಮಾಡಿಲ್ಲ, ಬದಲಿಗೆ ಗಿರಿಬಾಲಾ ಸಿಂಗ್ ಅವರ ಮೇಲೂ ಮಾಡಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ತ್ವಿಶಾ ಶರ್ಮ ತಮ್ಮ ಕುಟುಂಬದ ಸದಸ್ಯರಿಗೆ ರವಾನಿಸಿದ್ದ ಕೆಲವು ವಾಟ್ಸ್ ಆಯಪ್ ಸಂದೇಶಗಳಲ್ಲಿ ತಮ್ಮ ಅತ್ತೆಯ ವಿರುದ್ಧವೂ ಆರೋಪ ಮಾಡಿದ್ದಾರೆ ಎಂದು ನ್ಯಾಯಾಲಯ ಕಂಡುಕೊಂಡಿದೆ.
ತ್ವಿಶಾ ಶರ್ಮ ಮೃತಪಡುವುದಕ್ಕೂ ಮುನ್ನ, ಹೆಚ್ಚುವರಿ ಗಾಯಗಳಿಗೀಡಾಗಿದ್ದಾರೆ ಎಂಬ ಸಂಗತಿಯನ್ನು ಮರಣೋತ್ತರ ಪರೀಕ್ಷೆ ಸೂಚಿಸುತ್ತಿದೆ ಎಂದು ನ್ಯಾಯಾಲಯ ಗಮನಿಸಿದೆ.

