Dailyhunt
ಉದಯಪುರದಲ್ಲಿ ನಡೆದ ಬರ್ಬರ ಕೃತ್ಯ ತೀವ್ರ ಖಂಡನೀಯ: ಬಿ.ಕೆ ಹರಿಪ್ರಸಾದ್ ಟ್ವೀಟ್

ಉದಯಪುರದಲ್ಲಿ ನಡೆದ ಬರ್ಬರ ಕೃತ್ಯ ತೀವ್ರ ಖಂಡನೀಯ: ಬಿ.ಕೆ ಹರಿಪ್ರಸಾದ್ ಟ್ವೀಟ್

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡುಹಗಲಿನಲ್ಲೇ ವ್ಯಕ್ತಿಯೋರ್ವನನ್ನು ಹತ್ಯೆಗೈದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, 'ಧಾರ್ಮಿಕ ಮೂಲಭೂತವಾದ ಈ ನೆಲಕ್ಕೆ ಒಪ್ಪುವಂತದ್ದಲ್ಲ.

ಅಷ್ಟಕ್ಕೂ ಇನ್ನೊಬ್ಬರನ್ನು ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಇರಲು ಸಾಧ್ಯವೇ ಇಲ್ಲ. ಉದಯಪುರದಲ್ಲಿ ನಡೆದ ಬರ್ಬರ ಕೃತ್ಯ ತೀವ್ರ ಖಂಡನೀಯ, ದುಷ್ಕರ್ಮಿಗಳಿಗೆ ಕೂಡಲೇ ಅತ್ಯುಗ್ರ ಶಿಕ್ಷೆ ಆಗಬೇಕೆಂದು ಒತ್ತಾಯಿಸುತ್ತೇನೆ. ಕ್ರಿಯೆಗೆ ಪ್ರತಿಕ್ರಿಯೆ ಪರಿಹಾರವಲ್ಲ' ಎಂದು ಹೇಳಿದ್ದಾರೆ.

ಹತ್ಯೆಯ ಬೆನ್ನಲ್ಲೇ ಉದಯಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi