Dailyhunt
ಉಡುಪಿ| ಅಪಾಯ ಸ್ಥಿತಿಯಲ್ಲಿ ನಗರದ ಸಿಗ್ನಲ್ ಕಂಬ!

ಉಡುಪಿ| ಅಪಾಯ ಸ್ಥಿತಿಯಲ್ಲಿ ನಗರದ ಸಿಗ್ನಲ್ ಕಂಬ!

ಡುಪಿ, ಎ.3: ನಗರದ ಕವಿ ಮುದ್ದಣ ಮಾರ್ಗ ಪ್ರಾರಂಭ ಪಡೆಯುವ ತ್ರಿವೇಣಿ ವೃತ್ತದ ಬಳಿ, ನಿರುಪಯುಕ್ತ ಎರಡು ಕಬ್ಬಿಣದ ಸಿಗ್ನಲ್ ಕಂಬಗಳಿದ್ದು, ಇದು ಅಪಾಯವನ್ನು ಆಹ್ವಾನಿಸುವ ಸ್ಥಿತಿಯಲ್ಲಿದೆ.

ಹದಿನೈದು ವರ್ಷಗಳ ಹಿಂದೆ ಅಳವಡಿಸಿರುವ ಈ ಕಂಬಗಳು ಜಂಗು ಹಿಡಿದು ಬಿರುಕು ಬಿಟ್ಟಿರುವುದು ಕಾಣಿಸುತ್ತಿದ್ದು, ಆಗಲೋ ಈಗಲೋ ಧರೆಗುರುಳಿಯುವ ಸ್ಥಿತಿಯಲ್ಲಿದೆ.

ವಾಹನ ದಟ್ಟಣೆ, ಜನಸಂಚಾರ ಇರುವ ನಗರದ ಮುಖ್ಯ ರಸ್ತೆ ಇದಾಗಿದ್ದು, ಮಳೆ ಗಾಳಿಗೆ ಕಂಬವು ಆಯಾತಪ್ಪಿ ಬಿದ್ದು, ಅವಘಡ ಸಂಭವಿಸುವ ಆತಂಕ ಎದುರಾಗಿದೆ.

ಸಂಭವನೀಯ ದುರಂತವನ್ನು ತಡೆಯೊಡ್ಡಲು ನಿರುಪಯುಕ್ತ ಸಿಗ್ನಲ್ ಕಂಬವನ್ನು ಸಂಚಾರ ಪೋಲಿಸ್ ಇಲಾಖೆ, ನಗರಾಡಳಿತ, ಜಿಲ್ಲಾಡಳಿತವು, ತಕ್ಷಣವಾಗಿ ತೆರವುಗೊಳಿಸುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi