Dailyhunt
ಉಡುಪಿ: ರೌಡಿಶೀಟರ್ ಸಹಿತ ಇಬ್ಬರ ಗಡಿಪಾರು

ಉಡುಪಿ: ರೌಡಿಶೀಟರ್ ಸಹಿತ ಇಬ್ಬರ ಗಡಿಪಾರು

ಡುಪಿ: ಉಡುಪಿ ಜಿಲ್ಲೆಯ ರೌಡಿ ಶೀಟರ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಗಡಿಪಾರು ಮಾಡಿ ಉಡುಪಿ ಜಿಲ್ಲಾ ವಿಶೇಷ ಕಾರ್ಯಾಂಗ ದಂಡಾಧಿಕಾರಿಯಾಗಿರುವ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಎ.2ರಂದು ಆದೇಶ ಹೊರಡಿಸಿದ್ದಾರೆ.

ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಾವರ ಗ್ರಾಮದ ಪಿತ್ರೋಡಿ ಸಿಂಡಿಕೇಟ್ ಬ್ಯಾಂಕ್ ಬಳಿ ನಿವಾಸಿ ವಿಜೇತ ಹಾಗೂ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲೂರು ಗ್ರಾಮದ ಮುದರಂಗಡಿಯ ಆರೀಫ್ ಸಾಹೇಬ್ ಗಡಿಪಾರಾದ ಆರೋಪಿಗಳು.

ವಿಜೇತ ವಿರುದ್ಧ 4 ಕೊಲೆಗೆ ಪ್ರಯತ್ನ ಪ್ರಕರಣ ಮತ್ತು ಹಲ್ಲೆ ಪ್ರಕರಣಗಳು ಹಾಗೂ ಆರೀಫ್ ವಿರುದ್ಧ 5 ಕೊಲೆಗೆ ಪ್ರಯತ್ನ, ಹಲ್ಲೆ ಹಾಗೂ ಮಾದಕ ದ್ರವ್ಯ ಸೇವನೆ ಪ್ರಕರಣಗಳು ದಾಖಲಾಗಿವೆ. ಈತನ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ.

ವಿಜೇತನನ್ನು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಆರೀಫ್ ಸಾಹೇಬ್‌ನನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi